Chikkaballapur : ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಅಯೋಡಿನ್ ದಿನಾಚರಣೆ (World Iodine Day) ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ” ಅಯೋಡಿನ್ ಒಂದು ಸೂಕ್ಷ್ಮ ಪೋಷಕಾಂಶ. ಇದು ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅವಶ್ಯ. ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ವೈಕಲ್ಯ ಉಂಟಾಗುತ್ತದೆ. ಬೆಳವಣಿಗೆ ಕುಂಠಿತವಾಗುತ್ತದೆ. ದಿನನಿತ್ಯದ ಆಹಾರದಲ್ಲಿ ಅಯೋಡಿನ್‌ಯುಕ್ತ ಉಪ್ಪು ಬಳಸುವುದರಿಂದ ಅಯೋಡಿನ್ ಕೊರತೆ ನಿಯಂತ್ರಣ ಸಾಧ್ಯ. ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಒಂದು ದಿನಕ್ಕೆ 150 ರಿಂದ 300 ಮೈಕ್ರೊ ಗ್ರಾಂ ಅಯೋಡಿನ್ ಅಗತ್ಯವಿದ್ದು ಸಮುದ್ರದ ಆಹಾರ ಉತ್ಪನ್ನಗಳಲ್ಲಿ ಅಯೋಡಿನ್ ಹೆಚ್ಚಾಗಿರುತ್ತದೆ. ಅಯೋಡಿನ್ ಕೊರೆತೆಯಿಂದ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ ಶಕ್ತಿಯ ನಷ್ಟ, ಮೆಳ್ಳೆಗಣ್ಣು ಸ್ನಾಯುಗಳ ಮರಗಟ್ಟುವಿಕೆ, ಕುಬ್ಜತನ, ನಡಿಗೆಯಲ್ಲಿ ದೋಷಗಳು ಮೂಕತನ, ಗರ್ಭಿಣಿಯರಲ್ಲಿ ಪದೇ ಪದೇ ಗರ್ಭಪಾತ, ಗಳಗಂಡ ರೋಗ ಬರುತ್ತದೆ” ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಹರೀಶ್, ಡಿಎಸ್‌ಒ ಡಾ.ಕೃಷ್ಣ ಪ್ರಸಾದ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುಳಾ, ಉಪ ಆರೋಗ್ಯ ಶಿಕ್ಷಣಾಧಿಕಾರಿ ಸುಧಾ, ನಿತೀನ್, ತರಬೇತಿದಾರರಾದ ಗಾಯತ್ರಿ, ಶಿವಮ್ಮ, ನಾರಾಯಣಸ್ವಾಮಿ, ಕವಿತಾ, ಅನಿತಾ ಮತ್ತಿತರರು ಉಪಸ್ಥಿತರಿದ್ದರು.
[…] post ವಿಶ್ವ ಅಯೋಡಿನ್ ದಿನಾಚರಣೆ ಕಾರ್ಯಕ್ರಮ appeared first on […]