Home Sidlaghatta 27 ರಕ್ತ ಮಾದರಿಗಳಲ್ಲಿ ಝೀಕಾ ವೈರಸ್ ಇಲ್ಲ

27 ರಕ್ತ ಮಾದರಿಗಳಲ್ಲಿ ಝೀಕಾ ವೈರಸ್ ಇಲ್ಲ

0
261

Sidlaghatta : ಝೀಕಾ ವೈರಸ್ ಪತ್ತೆಗಾಗಿ ಕಳುಹಿಸಲಾಗಿದ್ದ ರಕ್ತ ಮಾದರಿಗಳಲ್ಲಿ 27 ಮಾದರಿಗಳ ಫಲಿತಾಂಶ ಬಂದಿದ್ದು, ವೈರಸ್ ಇಲ್ಲದಿರುವುದರಿಂದ ಯಾವುದೇ ತೊಂದರೆಯಿಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾಹಿತಿ ನೀಡಿದರು.

ರಾಜ್ಯದಲ್ಲಿಯೇ ಪ್ರಥಮ ಬಾರಿ ಝೀಕಾ ವೈರಸ್ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿನ ಸೊಳ್ಳೆಯೊಂದರಲ್ಲಿ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ತಲಕಾಯಲಬೆಟ್ಟ ಗ್ರಾಮದ 5 ಕಿಮೀ ವ್ಯಾಪ್ತಿಯಲ್ಲಿರುವ 5 ಗ್ರಾಮಗಳಲ್ಲಿ 37 ಗರ್ಭಿಣಿಯರು ಹಾಗೂ 11 ಜ್ವರಪೀಡಿತರ ಒಟ್ಟು 48 ರಕ್ತ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಲಾಗಿತ್ತು.

ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ವೈರಾಲಜಿಯಿಂದ ಇದುವರೆಗೂ 27 ಮಾದರಿಗಳ ಫಲಿತಾಂಶ ಬಂದಿದೆ. ಅದರಲ್ಲಿ 23 ಗರ್ಭಿಣಿಯರು ಹಾಗೂ 4 ಜ್ವರಪೀಡಿತದ್ದು ಇವೆ. ಇನ್ನೂ 21 ಮಾದರಿಗಳ ಫಲಿತಾಂಶ ಸದ್ಯದಲ್ಲಿಯೇ ಬರಲಿದೆ. ಆರೋಗ್ಯ ಇಲಾಖೆಯಿಂದ ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಉತ್ತಮ ಪೋಷಕಾಂಶಯುಕ್ತ ಆಹಾರ ಸೇವನೆಗೆ ಸೂಚನೆ ನೀಡಲಾಗಿದೆ. ಎಲ್ಲರೂ ಸೊಳ್ಳೆ ಪರದೆ ಬಳಸಿಕೊಂಡು ಮಲಗಲು ಸೂಚಿಸಲಾಗಿದೆ. ಸೊಳ್ಳೆ ಕಡಿತದಿಂದ ಸ್ವಯಂ ರಕ್ಷಣೆ ಮಾಡಿಕೊಂಡು ಝಿಕಾ ವೈರಸ್ ಆತಂಕದಿಂದ ದೂರ ಇರಲು ಸಲಹೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಯಾರೂ ಅನಗತ್ಯವಾಗಿ ಆತಂಕ ಪಡಬಾರದು. ವಾರದ ಒಣಗಲು ದಿನವನ್ನು ಖಡ್ಡಾಯವಾಗಿ ಮಾಡಲೇಬೇಕು. ಏಳು ದಿನಕ್ಕಿಂತ ಹೆಚ್ಚು ದಿನ ಇರುವ ನೀರಿನಲ್ಲಿ ಲಾರ್ವ ಉತ್ಪತ್ತಿ ಆಗುತ್ತವೆ. ಹಾಗಾಗಿ ವಾರಕ್ಕೊಮ್ಮೆ ಶೇಖರಿಸಿಟ್ಟ ನೀರನ್ನು ಬದಲಿಸಬೇಕು. ಆಶಾ ಕಾರ್ಯಕರ್ತೆಯರಿಗೆ ಕೇಳಿ ಲಾರ್ವ ತಿನ್ನುವ ಮೀನುಗಳನ್ನು ನೀರು ಶೇಖರಿಸಿಡುವಲ್ಲಿ ಬಿಡಿಸಬೇಕು. ಮೂರು ದಿನಗಳಿಂದ ಮಳೆ ಬೀಳುತ್ತಿರುವುದರಿಂದ ಮನೆಗಳ ಬಳಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡುವಂತೆ ಹೇಳಿದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!