Friday, March 29, 2024
HomeSidlaghattaಗ್ರಾಮೀಣ ಶಾಲೆಗೆ 2 ಲಕ್ಷ ರೂ.ವೆಚ್ಚದ ಡಿಜಿಟಲ್ ಬೋರ್ಡ್ ಹಸ್ತಾಂತರ

ಗ್ರಾಮೀಣ ಶಾಲೆಗೆ 2 ಲಕ್ಷ ರೂ.ವೆಚ್ಚದ ಡಿಜಿಟಲ್ ಬೋರ್ಡ್ ಹಸ್ತಾಂತರ

- Advertisement -
- Advertisement -
- Advertisement -
- Advertisement -

Sidlaghatta : ಗ್ರಾಮೀಣ ಭಾಗದ ಮಕ್ಕಳು ಇಂದಿನ ಸ್ಪರ್ಧಾಯುಗದಲ್ಲಿ ನಗರಪ್ರದೇಶದಲ್ಲಿ ಕಲಿತ ಮಕ್ಕಳೊಂದಿಗೆ ಉನ್ನತಶಿಕ್ಷಣ, ಉದ್ಯೋಗಗಳಿಗಾಗಿ ಸ್ಪರ್ಧೆ ಎದುರಿಸುವುದು ಕಷ್ಟಕರವಾಗಿದೆ. ಮಕ್ಕಳು ಕಲಿಕೆಯಲ್ಲಿ ಶಿಸ್ತು, ಸಮಯಪ್ರಜ್ಞೆಯಂತಹ ಗುಣಗಳನ್ನು ರೂಢಿಸಿಕೊಂಡು ಆತ್ಮವಿಶ್ವಾಸದಿಂದ ಕಲಿಯಬೇಕು. ಆ ಮೂಲಕ ಸ್ಪರ್ಧೆ, ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದು ರೀಚ್ ಇನ್ ಹ್ಯಾಂಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ರೀಚ್ ಇನ್ ಹ್ಯಾಂಡ್ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಇಂಟಲಿಜೆಂಟ್ ಇಂಟರಾಕ್ಟಿಂಗ್ ಪ್ಯಾನೆಲ್, ಡಿಜಿಟಲ್ ಬೋರ್ಡ್‌ನ ಹಸ್ತಾಂತರ, ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳಲ್ಲಿ ಸಮಯಪ್ರಜ್ಞೆ ಇರಬೇಕು. ಅಂದಿನ ಪಾಠವನ್ನು ಅಂದೇ ಓದುವ ಹವ್ಯಾಸವನ್ನು ತಮ್ಮದಾಗಿಸಿಕೊಳ್ಳಬೇಕು. ಉತ್ತಮ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧೆ ಮತ್ತು ನಿಷ್ಟೆಯಿಂದ ಕಲಿಯಬೇಕು. ಆಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಅವರು ತಿಳಿಸಿದರು.

ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಮಾತನಾಡಿ, ಮಕ್ಕಳಲ್ಲಿ ಅಧ್ಯಯನಾಸಕ್ತಿ ಕ್ಷೀಣಿಸುತ್ತಿದೆ. ಮೌಲ್ಯಗಳು ಕುಸಿಯುತ್ತಿದ್ದು, ಪಠ್ಯದ ಜೊತೆಗೆ ಉತ್ತಮ ಮೌಲ್ಯಗಳನ್ನು ಬೆಳೆಸಬಲ್ಲ ಪುಸ್ತಕಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಮುಖ್ಯಶಿಕ್ಷಕ ಬೈರಾರೆಡ್ಡಿ ಮಾತನಾಡಿ, ಮಕ್ಕಳು ಗುರು ಹಿರಿಯರಲ್ಲಿ ಗೌರವಾದರಗಳನ್ನು ತೋರುವ ಗುಣ ಬೆಳೆಸಿಕೊಳ್ಳಬೇಕು. ಪೋಷಕರೂ ಮಕ್ಕಳ ಕಲಿಕೆಯ ಕಡೆ ಹೆಚ್ಚು ಗಮನಹರಿಸಬೇಕಿದೆ. ಸುಮಾರು ಎರಡು ಲಕ್ಷ ರೂ.ವೆಚ್ಚದಲ್ಲಿ ಡಿಜಿಟಲ್ ಬೋರ್ಡ್‌ನ್ನು ಒದಗಿಸಿದ್ದು ಸ್ಮಾರ್‍ಟ್‌ಕ್ಲಾಸ್ ರೂಪದಲ್ಲಿ ಬಹುಪಯೋಗಿಯಾಗಿ ಸ್ಕ್ರೀನ್‌ನ್ನು ಬಳಸಿಕೊಳ್ಳಬಹುದಾಗಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಗ್ರಾಮದ ಮುಖಂಡ ಬೈರೇಗೌಡ, ರೀಚ್ ಇನ್ ಹ್ಯಾಂಡ್‌ನ ಖಂಡಪ್ಪ, ರಮೇಶ್‌ಬಾಬು, ಶಿಕ್ಷಕ ಎಂ.ಪಿ.ಜೀವೇಂದ್ರಕುಮಾರ್, ಬಿ.ಎಂ.ರಾಧಾಕೃಷ್ಣ, ಶಿಕ್ಷಕಿ ಯಶೋಧಮ್ಮ, ಸಿ.ಕೆ.ಮಂಜುಳಾ, ಪವಿತ್ರಬಡಿಗೇರ, ಶೈಲಜಾ, ಮೆಹಬೂಬ್‌ಸಾಬ್ ಹಾಜರಿದ್ದರು.

ವಿದ್ಯಾರ್ಥಿಗಳಿಗೆ ವಿಜ್ಞಾನ ಚಿತ್ರಗಳನ್ನು ರಂಗೋಲಿಮೂಲಕ ಹಾಕುವ ಸ್ಪರ್ಧೆ, ಜ್ಞಾಪಕಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು.


Reach in Hand Organises Program to Encourage Rural Children to Compete in Today’s World

Sidlaghatta : Rural children face a tough challenge in competing with their urban counterparts for higher education and job opportunities in today’s competitive age. Vijayakumar, the Managing Director of Reach in Hand, believes that developing self-discipline, punctuality, and confidence in learning is essential for children to face the competition and exams with ease.

Vijayakumar made these remarks while participating in a program organised under the auspices of Reach in Hand at Dyappanagudi Government High School in Sidlaghatta taluk. The program included the distribution of an intelligent interacting panel, a digital board, and the prize distribution for various competitions.

During his speech, Vijayakumar emphasized the importance of punctuality, daily revision, and diligent studying under the guidance of a guru with a clear aim. He stressed that only by following these principles, rural children could create a better future for themselves.

LV Venkatreddy, the President of the Taluk High School Co-Teachers’ Association, pointed out that the interest in studies among children is declining, and values are deteriorating. He suggested that children should engage in reading books that could develop good values along with their textbooks.

Headmaster Byrareddy emphasized the importance of showing respect to elders and urged parents to pay more attention to their children’s learning. He informed the attendees that the digital board, worth around two lakh rupees, could be used for multi-purpose smart classes.

The event was attended by several dignitaries, including SDMC President Venkatesh, Village Leader Byre Gowda, and Reach in Hand members Khandappa and Rameshbabu. The students participated in various competitions such as science picture rangoli, memorization, and painting, and were awarded prizes.

The program was a great success and aimed to encourage rural children to develop essential skills and values to compete and succeed in today’s world.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!