Home Sidlaghatta ಚುನಾವಣೆಗೆ ಸಕಲ ಸಿದ್ದತೆ

ಚುನಾವಣೆಗೆ ಸಕಲ ಸಿದ್ದತೆ

0
721

Sidlaghatta : ಮೇ 10 ರ ಬುಧವಾರ ನಡೆಯುವ ವಿಧಾನಸಭಾ ಚುನಾವಣೆಗೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿರುವುದಾಗಿ ಚುನಾವಣಾಧಿಕಾರಿ ಜಾವಿದಾ ನಸೀಮಾ ಖಾನಂ ತಿಳಿಸಿದರು.

ನಗರದ ಜೂನಿಯರ್ ಕಾಲೇಜ್ ಆವರಣದಲ್ಲಿ ಮಂಗಳವಾರ ಚುನಾವಣಾ ಮತಟ್ಟೆಗಳಿಗೆ ಚುನಾವಣಾ ಯಂತ್ರ ಸೇರಿದಂತೆ ಸಲಕರಣೆಗಳನ್ನು ಅಧಿಕಾರಿಗಳಿಗೆ ವಿತರಣೆ ಮಾಡಿ ಅವರು ಮಾತನಾಡಿದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 242 ಮತಗಟ್ಟೆಗಳು ಇದ್ದು, ಒಂದೊಂದು ಮತಗಟ್ಟೆಗೆ 4 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಅಗತ್ಯ ಇರುವ ಮತಗಟ್ಟೆಗೆ ಹೆಚ್ಚಿನ ಸಿಬ್ಬಂದಿ ಒದಗಿಸುವ ಜೊತೆಗೆ ಅಗತ್ಯವಾಗಿರುವ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನ 242 ಮತಗಟ್ಟೆಗಳಿಗೆ ಇ.ವಿ.ಎಂ, ಸಲಕರಣೆಗಳ ಜೊತೆ ಚುನಾವಣಾ ಸಿಬ್ಬಂದಿಯನ್ನು ಚುನಾವಣಾ ಮತಗಟ್ಟೆಗಳಿಗೆ ಬಿಡುವುದು ಹಾಗೂ ಚುನಾವಣೆ ನಂತರ ಕರೆತರುವುದಕ್ಕೆ 40 ಬಸ್ಸುಗಳು ಸೇರಿದಂತೆ ವಿವಿಧ ಜೀಪ್‌ಗಳನ್ನು ಆಯೋಜನೆ ಮಾಡಲಾಗಿದ್ದು, ಚುನಾವಣಾ ಸಮಯದಲ್ಲಿ ಅಧಿಕಾರಿಗಳು ಬೂತ್‌ಗಳಿಗೆ ಓಡಾಡಲು 6 ಜೀಪುಗಳ ನೀಡಲಾಗಿದೆ ಎಂದು ತಿಳಿಸಿದರು.

ಒಟ್ಟು 242 ಮತಗಟ್ಟೆಗಳಿಗೆ 1160 ಚುನಾವಣಾ ಸಿಬ್ಬಂದಿ, 600 ಪೊಲೀಸ್ ಸಿಬ್ಬಂದಿ, ಹೋಮ್ ಗಾರ್ಡ್, ಪ್ಯಾರಾಮಿಲಿಟರಿ ಪಡೆಯನ್ನು ನೇಮಕ ಮಾಡಲಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸಿದ್ದವಾಗಿದ್ದೇವೆ ಎಂದು ತಿಳಿಸಿದರು.

ಮತದಾನ ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನಡೆಯಲಿದ್ದು, ಮತದಾನ ಮಾಡಲು ಮತದಾರರು ತಮ್ಮ ಬಳಿರುವ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಸೇರಿದಂತೆ 10 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತ ಚಲಾಯಿಸಬಹುದು ಎಂದರು.

ಚುನಾವಣೆ ಮುಕ್ತಾಯವಾಗುವುದು ವಿಳಂಬವಾಗುವುದರಿಂದ ಚುನಾವಣಾ ಕಾರ್ಯಕ್ಕೆ ತೆರಳುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ವಸ್ಥಳಗಳಿಗೆ ತಲುಪಿಸಲು ಸೂಕ್ತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!