Friday, April 19, 2024
HomeSidlaghattaಬಿಜೆಪಿಯ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ

ಬಿಜೆಪಿಯ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ

- Advertisement -
- Advertisement -
- Advertisement -
- Advertisement -

Sidlaghatta : ಭಾರತಮಾತೆ ಎಂದು ದೇಶವನ್ನೇ ಹೆಣ್ಣು ಮಕ್ಕಳ ಹೆಸರಿನಲ್ಲಿ ಕರೆಯುವ ದೇಶ ನಮ್ಮದು. ಇಲ್ಲಿ ಮಾತೃದೇವೋಭವ ಎಂದು ಮೊದಲು ಹೇಳುತ್ತಾರೆ. ಇಲ್ಲಿನ ದೇವರುಗಳನ್ನು ಸಹ ಲಕ್ಷ್ಮಿ ನಾರಾಯಣ, ರಾಧ ಕೃಷ್ಣ, ಸೀತಾ ರಾಮ ಎಂದು ಕರೆಯುತ್ತಾರೆ. ಆದರೆ ನಾವೇ ಇದೊಂದು ಪುರುಷ ಪ್ರಧಾನ ಸಮಾಜ ಮಾಡಲು ಹೊರಟಿದ್ದೇವೆ. ಮೂಲತಃ ನಮ್ಮ ದೇಶ ಸ್ತ್ರೀ ಪ್ರಧಾನ ದೇಶವಾಗಿದೆ ಎಂದು ವಿಧಾನಪರಿಷತ್ ಸದಸ್ಯೆ ಭಾರತಿಶೆಟ್ಟಿ ಹೇಳಿದರು.

ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿನ ಬಿಜೆಪಿಯ ಸೇವಾ ಸೌಧದಲ್ಲಿ ಭಾನುವಾರ ನಡೆದ ಬಿಜೆಪಿಯ ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಮಹಿಳೆಯರು ತಮಗೆ ಅಗತ್ಯವಿರುವ ಹಣ ಪಡೆಯಲು ತಂದೆ, ಅಣ್ಣ, ತಮ್ಮ, ಪತಿಯನ್ನು ಅವಲಂಬಿಸಬಾರದು ಎಂಬ ಪರಿಕಲ್ಪನೆಯಿಂದ ಮಹಿಳಾ ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿದ ಕೀರ್ತಿ ಅಟಲ್ ಬಿಹಾರಿ ವಾಜಪೇಯಿರಿಗೆ ಸಲ್ಲಬೇಕಾಗುತ್ತದೆ.

ಬ್ರಿಟೀಷರ ಹಾದಿಯಿಂದ ಹಿಡಿದು ಕಾಂಗ್ರೆಸ್‌ನವರು ಆಡಳಿತ ನಡೆಸಿದ 70 ವರ್ಷಗಳಲ್ಲಿ ದೇಶಾಧ್ಯಂತ ಕೇವಲ 6725 ಕಿ.ಮೀ ಇದ್ದ ಹೆದ್ದಾರಿಗಳು 2014 ರ ನಂತರ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಮೇಲೆ 13,500 ಕಿ.ಮೀ ಹೆದ್ದಾರಿ ಕೇವಲ ಕರ್ನಾಟಕ ರಾಜ್ಯವೊಂದರಲ್ಲಿ ನಿರ್ಮಿಸಿದೆ. ಕೇವಲ 10 ವರ್ಷಗಳ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಷ್ಟೆಲ್ಲಾ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ನರೇಂದ್ರಮೋದಿ ಕೈ ಬಲಪಡಿಸುವ ಕೆಲಸ ಆಗಬೇಕಿದೆ ಎಂದರು.

ಬಿಜೆಪಿ ಟಿಕೆಟ್ ಆಕಾಂಕ್ಷಿ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಜೆಟ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೋಟ್ಯಾಂತರ ಹಣ ಮೀಸಲಿಟ್ಟಿದೆಯಾದರೂ ಮನೆ ಮನೆಗೂ ಈ ಯೋಜನೆಗಳನ್ನು ತಲುಪಿಸುವ ನಾಯಕರ ಕೊರತೆ ಇದೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಅತಿ ಹೆಚ್ಚು ನಾಯಕರನ್ನು ಆಯ್ಕೆ ಮಾಡಿದಲ್ಲಿ ಪ್ರತಿಯೊಬ್ಬರಿಗೂ ಯೋಜನೆಗಳ ಲಾಭ ಸಿಗುತ್ತದೆ ಎಂದರು.

ಗ್ರಾಮೀಣ ಭಾಗದ ಮಹಿಳೆಯರು ಬಹುತೇಕರು ಅವಿದ್ಯಾವಂತರಾಗಿದ್ದು ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಯಾವುದೇ ಯೋಜನೆಗಳ ಬಗ್ಗೆ ಅವರಿಗೆ ಗೊತ್ತಿರುವುದಿಲ್ಲ. ಅಂತಹವರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸಬೇಕಾದರೆ ನಾಯಕರ ಅಗತ್ಯವಿದೆ. ಹಾಗಾಗಿ ತಮ್ಮೆಲ್ಲರ ಸೇವೆ ಮಾಡಲು ರಾಜ್ಯದಲ್ಲಿ ಮತ್ತಷ್ಟು ಬಿಜೆಪಿ ನಾಯಕರನ್ನು ಬೆಳಸಿ ಎಂದರು.

ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ಪದ್ಮಪ್ರಕಾಶ್, ಮಹಿಳಾ ಮೋರ್ಚಾ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ನಿಶ್ಚಿತಾಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ನರ್ಮದಾರೆಡ್ಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ, ನಗರ ಮಂಡಲ ಅಧ್ಯಕ್ಷ ಎಸ್.ರಾಘವೇಂದ್ರ ಹಾಜರಿದ್ದರು.


BJP Leaders Stress Importance of Women’s Empowerment and Infrastructure Development

In Chikkaballapur district women’s convention held by the BJP in Sidlaghatta on sunday, Bharatishetti, a member of Vidhan Parishad, spoke about the importance of empowering women in India. She highlighted that India is often referred to as “Mother India” after the names of girls and that the deities worshipped in the country, such as Lakshmi Narayana, Radha Krishna, and Sita Rama, are often female.

Despite this, Bharatishetti expressed concern about the potential for India to become a male-dominated society. She credited former Prime Minister Atal Bihari Vajpayee with establishing the Mahila Stri Shakti Sanghs to encourage women to become financially independent.

BJP ticket aspirant Seikal Ramachandra Gowda also spoke at the convention, highlighting the government’s allocation of funds for the welfare of women and children in the budget. However, he noted that there is a lack of leaders to deliver these projects effectively, particularly in rural areas where many women are uneducated and work as laborers.

Gowda urged the cultivation of more BJP leaders in the state to serve these communities and deliver the benefits of government schemes. He emphasized the need for door-to-door delivery of these projects to ensure that those who need them most are aware of and can access them.

The convention was attended by various BJP leaders, including Mahila Morcha State Secretary Dr. Padmaprakash, Mahila Morcha State Sangh General Secretary Sishtagowda, and Former MLA M. Rajanna. The event focused on the importance of empowering women and ensuring that they have equal opportunities in all aspects of life.

In addition to discussing women’s issues, the BJP leaders also highlighted the government’s efforts to develop infrastructure in the country. They noted that since the Modi-led government came to power in 2014, 13,500 km of highways have been built in Karnataka alone, compared to just 6,725 km during the 70 years of Congress rule.

Overall, the convention emphasized the importance of empowering women and ensuring that they have access to government schemes and opportunities. The leaders urged the cultivation of more BJP leaders to deliver these projects effectively and strengthen the hand of Prime Minister Narendra Modi.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!