- Advertisement -
- Advertisement -
- Advertisement -
- Advertisement -
Chintamani : ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿ ಕಲ್ಕಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ (Alambagiri Kalki Lakshmi Venkataramana Swamy Temple) ಶುಭಕೃತುನಾಮ ಸಂವತ್ಸರದ ಯುಗಾದಿ ಹಬ್ಬದ ಅಂಗವಾಗಿ ಪಂಚಾಂಗ ಶ್ರವಣ ಮಾಡಲಾಯಿತು. ಶುಭಕೃತುನಾಮ ಸಂವತ್ಸರದ ಪ್ರಥಮದಿನ ಯುಗಾದಿಯಂದು ಪಂಚಾಂಗಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಅರ್ಚಕ ವೃಂದ ಮಂತ್ರಘೋಷದೊಂದಿಗೆ ಪಂಚಾಂಗ ಶ್ರವಣವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ದಂಪತಿ ಭಾಗವಹಿಸಿದ್ದರು. ಯುಗಾದಿ ಪ್ರಯುಕ್ತ ವಿಶೇಷ ಪ್ರಾಕಾರೋತ್ಸವವನ್ನು ಏರ್ಪಡಿಸಲಾಗಿತ್ತು. ಭಜನೆಯನ್ನು ಹಮ್ಮಿಕೊಳ್ಳಲಾಗಿತ್ತು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -