Chintamani : ಏಪ್ರಿಲ್ 1 ರಂದು ಚಿಕ್ಕಬಳ್ಳಾಪುರಕ್ಕೆ (Chikkaballapur) ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಬುಧವಾರ ಚಿಂತಾಮಣಿ ನಗರದ KMD ಕಲ್ಯಾಣ ಮಂಟಪದಲ್ಲಿಆಯೋಜಿಸಲಾಗಿದ್ದ BJP ಕಾರ್ಯಕರ್ತರ ಪೂರ್ವಬಾವಿ ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ (Dr. K Sudhakar) ಪಾಲ್ಗೊಂಡಿದ್ದರು.
ಚಿಕ್ಕಬಳ್ಳಾಪುರದಲ್ಲಿ ಸತ್ಯಸಾಯಿ ಸಂಸ್ಥೆಯಿಂದ ವೈದ್ಯಕೀಯ ಕಾಲೇಜು ಸ್ಥಾಪನೆ ಆಗಲಿದ್ದು, ಶೀಘ್ರದಲ್ಲೇ ಜಿಲ್ಲೆಯ ಜನರ ಸೇವೆಗೆ ಎರಡು ವೈದ್ಯಕೀಯ ಕಾಲೇಜು ಲಭ್ಯವಾಗಲಿವೆ. ಕಾರಣಾಂತರಗಳಿಂದ ರಾಜ್ಯಕ್ಕೆ ಏ 5ರಂದು ಭೇಟಿ ನೀಡಬೇಕಿದ್ದ ಪ್ರಧಾನಿ ಅವರ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ. ಶ್ರೀರಾಮನವಮಿ ದಿನ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಮನೆಯ ಮೇಲೂ ಕೇಸರಿ ಧ್ವಜವನ್ನು ಹಾರಿಸ ಬೇಕು. ಈ ಬಗ್ಗೆ ಮತ್ತೊಂದು ಸಭೆಯನ್ನು ಕರೆದು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಚಿಂತಾಮಣಿ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್, ಮಾಜಿ ಶಾಸಕ ರಾಜಣ್ಣ, ಮುಖಂಡರಾದ ನಾ.ಶಂಕರ್, ಅರುಣಬಾಬು, ಶಿವಾರೆಡ್ಡಿ, ಮಹೇಶ್ ಬೈ, ವೆಂಕಟಶಿವಾರೆಡ್ಡಿ, ಗೋವಿಂದರಾಜು, ಡಾಬ ಮಂಜು ನಾಥ್, ನಾರಾಯಣರಾಜು, ಸಿ.ಆರ್.ವೆಂಕಟೇಶ್, ನಾರಾಯಣರೆಡ್ಡಿ, ಆಂಜನೇಯರೆಡ್ಡಿ, ಕೋಟಗಲ್ ಪ್ರದೀಪ್, ಕೈವಾರ ಜಯರಾಂ, ಬಿ.ಜಿ.ಮಂಜುನಾಥ್ ಮತ್ತಿತರರು ಭಾಗವಹಿಸಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur