ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಆ.21 ರಂದು ಬುಧವಾರ ಚಿಂತಾಮಣಿ ನಗರದ 220 ಕೆವಿ ಸ್ವೀಕರಣಾ ಕೇಂದ್ರ ಹಾಗೂ ಅದರ ವ್ಯಾಪ್ತಿಯ 66/11 ಕೆವಿ ವಿದ್ಯುತ್ ಉಪಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿದ್ದು, ಸದರಿ ಸ್ವೀಕರಣಾ ಕೇಂದ್ರದಿಂದ ಸರಬರಾಜಾಗುವ ಚಿಂತಾಮಣಿ, ತಳಗವಾರ, ಕೆ.ರಾಗುಟ್ಟಹಳ್ಳಿ, ಬೊಮ್ಮೆಪಲ್ಲಿ ಕ್ರಾಸ್, ಏನಿಗದಲೆ, ನಂದಿಗಾನಹಳ್ಳಿ, ಜಿ.ಕೋಡಿಹಳ್ಳಿ, ಇರಗಂಪಲ್ಲಿ, ಬುರುಡಗುಂಟೆ, ಎಂ.ಗೊಲ್ಲಹಳ್ಳಿ, ಶಿಡ್ಲಘಟ್ಟ ತಾಲ್ಲೂಕಿನ ಶಿಡ್ಲಘಟ್ಟ, ಚೀಮಂಗಲ, ವೈ.ಹುಣಸೇನಹಳ್ಳಿ, ಮೇಲೂರು, ಗಂಜಿಗುಂಟೆ, ಪಲ್ಲಿಚರ್ಲು, ದಿಬ್ಬೂರಹಳ್ಳಿಯ ಉಪಕೇಂದ್ರಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ ತಿಳಿಸಲಾಗಿದೆ.
ಬುಧವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ 220 ಕೆವಿ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಚಿಂತಾಮಣಿ ವಿಭಾಗ ವ್ಯಾಪ್ತಿಯ ಎಲ್ಲಾ 66/11 ಮಾರ್ಗಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ ಎನ್ನಲಾಗಿದೆ. ಈ ಪ್ರದೇಶಗಳ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಗ್ರಾಹಕರು ಮನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ.