Bagepalli : ಬಾಗೇಪಲ್ಲಿ ತಾಲ್ಲೂಕು ದೇವರಗುಡಿಪಲ್ಲಿ ಗ್ರಾಮದಲ್ಲಿ ಭಾನುವಾರ ತಾಲ್ಲೂಕು ಬ್ರಾಹ್ಮಣರ ಮಹಾಸಭಾ (Bagepalli Taluk Brahmana Mahasabha) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಖಿಲ ಕರ್ನಾಟಕ ಆರುವೇಲು ನಿಯೋಗಿ ಬ್ರಾಹ್ಮಣ ಸಂಘದ ಅಧ್ಯಕ್ಷ ವೈ.ಆರ್.ಜನಾರ್ದನರಾವ್ ಮಾತನಾಡಿದರು.
ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರ ಇತರೆ ಜಾತಿಗಳಂತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿಲ್ಲ. ಆದರೆ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಸ್ವಂತ ಶ್ರಮದಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೆ ಸಮುದಾಯಗಳಿಗೆ ಹೋಲಿಸಿದರೆ ಬ್ರಾಹ್ಮಣ ಸಮುದಾಯವರು ಎಲ್ಲಾ ರಂಗಗಳಲ್ಲಿ ಹಿಂದುಳಿದಿದ್ದು, ಸಮುದಾಯದವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿ ಹಲವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಜಿಲ್ಲಾ ರಕ್ಷಣಾಧಿಕಾರಿ ಕೆ.ಎ.ರಾಜಗೋಪಾಲ್ ಅವರು ಮಾತನಾಡಿ, ಬ್ರಾಹ್ಮಣ ಸಮುದಾಯದವರು ಆರ್ಥಿಕವಾಗಿ ಹಿಂದುಳಿದಿದ್ದಾರೆ ಆದರೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಮೂಲ್ಯವಾದ ಸಮಯವನ್ನು ಸದುಪಯೋಗ ಪಡಿಸಿಕೊಂಡು ಶ್ರದ್ಧೆಯಿಂದ ಕಲಿತು ಗುರಿ ಸಾಧಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ವೈದ್ಯ, ಎಂಜಿನಿಯರ್ ಇತರೆ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ, ನಗದು ಪುರಸ್ಕಾರ ಮತ್ತು ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡಲಾಯಿತು. ಬ್ರಾಹ್ಮಣ ಸಮುದಾಯದ ಸಿ.ಎ.ಶೇಷಾದ್ರಿ, ಇಂದಿರಮ್ಮ, ಶೇಷಗಿರಿರಾವ್, ಎಸ್.ಎನ್.ಲಕ್ಷ್ಮಿ, ಎಚ್.ಎಸ್.ವೆಂಕಟೇಶ್ ಪ್ರಸಾದ್, ಎಂ.ಎನ್.ಉಷಾದೇವಿ, ಸುಮಾ ಅವರನ್ನು ಗೌರವಿಸಲಾಯಿತು.
ಬೆಂಗಳೂರಿನ ವೇದಬ್ರಹ್ಮ ಗಣೇಶ್‍ದೀಕ್ಷಿತ್, ಕೊಟ್ಟಂಪಲ್ಲಿ ಕೆ.ಎನ್.ರಮೇಶ್ ಬಾಬು, ಎಂ.ಶೇಷಗಿರಿಬಾಬು, ಎನ್.ಎ.ಪ್ರಸಾದ್, ಅರ್ಚಕ ಕೆ.ಪ್ರಕಾಶ್ ರಾವ್, ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷ ವಿ.ರಘುವೀರಶರ್ಮ, ಕಾರ್ಯದರ್ಶಿ ಸಿ.ವಿ.ವೆಂಕಟರಾವ್, ಹನುಮೇಶ್, ಎನ್.ನಾಗರಾಜ್, ಜಿ.ಲಕ್ಷ್ಮಿನಾರಾಯಣ ರಾವ್, ಎಚ್.ಎಸ್.ವರುಣ್, ಸೀತಾರಾಮ್‌ಶಾಸ್ತ್ರಿ, ಎಸ್.ವೇಣು, ಬಿ.ಎಸ್.ಕೃಷ್ಣ, ನಂಜುಂಡಶರ್ಮ, ಟಿ.ಎನ್.ರವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur