Bagepalli : ಬಾಗೇಪಲ್ಲಿ CPM ತಾಲ್ಲೂಕು ಸಮಿತಿ ಮುಖಂಡರು, ಸದಸ್ಯರು ಬುಧವಾರ ಪಟ್ಟಣದ ಸುಂದರಯ್ಯ ಭವನದ ಮುಂಭಾಗದಿಂದ ಮುಖ್ಯರಸ್ತೆಯಲ್ಲಿ ಬೈಕ್ ರ್ಯಾಲಿ ಮಾಡಿ 1980ರಲ್ಲಿ ಪೊಲೀಸ್ ಗೋಲಿಬಾರ್ ನಲ್ಲಿ ಹುತಾತ್ಮರಾದ ರೈತ (Matyr farmer) ಆದಿನಾರಾಯಣರೆಡ್ಡಿ ಹಾಗೂ ದದ್ದಿಮಪ್ಪರವರ ಸ್ತೂಫಕ್ಕೆ ಹೂವು ಅರ್ಪಿಸಿ, ಪ್ರಜಾ ನಾಟ್ಯ ಕಲಾ ಮಂಡಳಿಯವರು ಕ್ರಾಂತಿಗೀತೆ ಹಾಡುವ ಮೂಲಕ ಶ್ರದ್ಧಾಂಜಲಿ (Tribute) ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಸಿದ್ದಗಂಗಪ್ಪ “1980ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ನರಗುಂದ ಹಾಗೂ ನವಲಗುಂದಲ್ಲಿ ರೈತರು ಮಾಡುವ ಹೋರಾಟಕ್ಕೆ ಬೆಂಬಲವಾಗಿ ತಾಲ್ಲೂಕಿನ ಸಿಪಿಎಂ ಮುಖಂಡ ಅಪ್ಪಸ್ವಾಮಿ ರೆಡ್ಡಿ, ಎನ್.ವಿ.ನಾಗಭೂಷಣಾಚಾರಿ, ಡಿ.ಎನ್.ಜಯರಾಮರೆಡ್ಡಿ, ಡಿ.ಎನ್.ವೆಂಕಟರೆಡ್ಡಿ ನೇತೃತ್ವದಲ್ಲಿ ರೈತರು ಬೀದಿಗಿಳಿದು ಹೋರಾಡಿದ್ದರು. ಪೊಲೀಸರು ಗೋಲಿಬಾರ್ ಮಾಡಿದಾಗ ರೈತ ಆದಿನಾರಾಯರೆಡ್ಡಿ, ದದ್ದಿಮಪ್ಪ ಹುತಾತ್ಮರಾಗಿದ್ದಾರೆ” ಎಂದು ತಿಳಿಸಿದರು.
ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ, ರಾಜ್ಯ ಸಮಿತಿ ಸದಸ್ಯ ಡಾ.ಅನಿಲ್‍ಕುಮಾರ್, ಗೊಲ್ಲಪಲ್ಲಿಮಂಜುನಾಥ್, ಚನ್ನರಾಯಪ್ಪ, ಎಚ್.ಎ.ರಾಮ ಲಿಂಗಪ್ಪ, ಚಂದ್ರಶೇಖರೆಡ್ಡಿ, ನೊಲಿಗುಂಬು ಬೈಯರೆಡ್ಡಿ, ಬಿಳ್ಳೂರು ನಾಗರಾಜ್, ಬಿ.ಸಾವಿತ್ರಮ್ಮ, ಅಶ್ವತ್ಥಪ್ಪ, ದೇವಿಕುಂಟೆ ಶ್ರೀನಿವಾಸ್, ಮುಸ್ತಾಫ, ರಾಮಾಂಜಿ, ಒಬಳರಾಜು, ಚಂಚುರಾಯನಪಲ್ಲಿ ಕೃಷ್ಣಪ್ಪ, ಬಿ.ಎಚ್.ರಫೀಕ್, ವೆಂಕಟರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.