Bagepalli : ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ಅರ್ಹ ಫಲಾನುಭವಿಗಳಿಗೆ KCC ಸಾಲ ವಿತರಣೆ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ SHG Loan ಸಾಲಗಳ ಚೆಕ್ ವಿತರಣಾ ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ (DCC Bank) ನಿರ್ದೇಶಕ ವಿ.ವೆಂಕಟಶಿವಾ ರೆಡ್ಡಿ ಉದ್ಘಾಟಿಸಿದರು.
ತಾಲ್ಲೂಕಿನ ಕಟ್ಟಕಡೆಯವರಿಗೆ ಸರ್ಕಾರದ ಸೌಲಭ್ಯ ದೊರಕಿಸಿ ರೈತರಿಗೆ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ₹100 ಕೋಟಿ ಸಾಲ ನೀಡಲು ಡಿಸಿಸಿ ಬ್ಯಾಂಕ್ ಸಿದ್ಧವಿದೆ. ಡಿಸಿಸಿ ಬ್ಯಾಂಕಿನಲ್ಲಿ ಅರ್ಜಿ ಹಾಕಿದ ಕೆಲವೇ ತಿಂಗಳುಗಳಲ್ಲಿ ಮಹಿಳೆಯರಿಗೆ, ರೈತರಿಗೆ ಬಡ್ಡಿ ಇಲ್ಲದೇ ಸಾಲ ನೀಡುತ್ತಿದ್ದರೂ ಸಹಕಾರ ಸಂಘಗಳ ಆಡಳಿತ ಮಂಡಳಿಯವರು, ಕಾರ್ಯದರ್ಶಿಗಳು ಜನರಿಗೆ ಸಾಲಸೌಲಭ್ಯ ಕಲ್ಪಿಸದೇ ಇರುವುದು ನೋವಿನ ಸಂಗತಿ ಎಂದು ನಿರ್ದೇಶಕ ವಿ.ವೆಂಕಟಶಿವಾ ರೆಡ್ಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ದೇವರಗುಡಿಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ 65 ರೈತ ಸದಸ್ಯರಿಗೆ ₹84 ಲಕ್ಷ ಕೆಸಿಸಿ ಸಾಲದ ಚೆಕ್‌ಗಳನ್ನು ಹಾಗೂ 28 ಸ್ವಸಹಾಯ ಗುಂಪುಗಳಿಗೆ ₹92.16 ಲಕ್ಷ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸಿ.ಎಸ್.ಚೇತನ್, ತಾಲ್ಲೂಕು ಮೇಲ್ವಿಚಾರಕ ಆಂಜನೇಯ ರೆಡ್ಡಿ, ದೇವರಗುಡಿಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಸಿ.ವೆಂಕಟರವಣಪ್ಪ, ಉಪಾಧ್ಯಕ್ಷ ಯಶೋಧಮ್ಮ, ನಿರ್ದೇಶಕರಾದ ಜಿ.ಎಂ.ರಾಮಕೃಷ್ಣಪ್ಪ, ಗಂಗಾಧರಪ್ಪ, ಕೆ.ವಿ.ಅಶ್ವತ್ಥನಾರಾಯಣ, ವಿ.ವೆಂಕಟರವಣಪ್ಪ, ಆಂಜನರೆಡ್ಡಿ ನಿರ್ದೇಶಕರು ಉಪಸ್ಥಿತರಿದ್ದರು.