Bagepalli : ಬಾಗೇಪಲ್ಲಿ ತಾಲ್ಲೂಕಿನ ದೇವರ ಗುಡಿಪಲ್ಲಿ (ಗಡಿದಂ) ಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ಡಿ. 6ರಂದು ಎಸ್.ಎನ್. ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ 22ನೇ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಬುಧವಾರ, ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ತಮ್ಮ ನಿವಾಸದಲ್ಲಿ ನೋಂದಾಯಿತ 140 ವಧು-ವರರಿಗೆ ವಸ್ತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಶೀಲಾ ಸುಬ್ಬಾರೆಡ್ಡಿ, ಪ್ರಭಾಕರರೆಡ್ಡಿ, ಎ.ಶ್ರೀನಿವಾಸ್, ಪಿ.ಮಂಜುನಾಥರೆಡ್ಡಿ, ಎಸ್.ಎನ್. ಸೂರ್ಯನಾರಾಯಣರೆಡ್ಡಿ, ಎ.ವಿ. ಪೂಜಪ್ಪ, ಬಿ. ವೆಂಕಟರವಣ, ಲಕ್ಷ್ಮಿನರಸಿಂಹಪ್ಪ, ಮತ್ತು ಬಿಳ್ಳೂರು ಕೆ.ಎಂ. ನಾಗರಾಜ್ ಉಪಸ್ಥಿತರಿದ್ದರು.