Bagepalli : ಮಂಗಳವಾರ ಬಾಗೇಪಲ್ಲಿಯಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನದಲ್ಲಿ (Janatha Darshana) ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರಿಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಕಂದಾಯ ಇಲಾಖೆ 30, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 10, ಮುಜರಾಯಿ ಇಲಾಖೆ 5, ಲೋಕೊಪಯೋಗಿ ಇಲಾಖೆ 1, ಕರ್ನಾಟಕ ಗೃಹ ಮಂಡಲಿ 1, ಪುರಸಭೆ 18, ಲೀಡ್ ಬ್ಯಾಂಕ್‌ಗೆ ಸಂಬಂಧಿಸಿ ಒಂದು ಅರ್ಜಿ ಸೇರಿದಂತೆ ಜನತಾ ದರ್ಶನದಲ್ಲಿ 67 ಅರ್ಜಿ ಸ್ವೀಕೃವಾಯಿತು.
ಈ ಸಂದರ್ಭದಲ್ಲಿ ಸಿಇಒ ಪ್ರಕಾಶ್ ಜಿ.ನಿಟ್ಟಾಲಿ, ತಹಶೀಲ್ದಾರ್ ಪ್ರಶಾಂತ್ ಕೆ.ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಇಒ ರಮೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ಉಪಸ್ಥಿತರಿದ್ದರು.