Bagepalli : ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (Karnataka Border Area Development Authority) ಹಾಗೂ ಬೆಂಗಳೂರಿನ ರಂಗಧರ್ಮ ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಬಾಗೇಪಲ್ಲಿ ತಾಲ್ಲೂಕಿನ ನಾರೇಪಲ್ಲಿ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ (Cultural Festival Program) ಹಮ್ಮಿಕೊಳ್ಲಲಾಗಿತ್ತು. ಈ ಸಂದರ್ಭದಲ್ಲಿ ಅಮಾಸ ಸಾಂಸ್ಕೃತಿಕ ಕೇಂದ್ರದಿಂದ ‘ಕುರುಕ್ಷೇತ್ರ’ ನಾಟಕ ಪ್ರದರ್ಶನ ನಡೆಯಿತು ಮತ್ತು ವಿವಿಧ ಕಲಾತಂಡಗಳಿಂದ ಗೊರವರ ಕುಣಿತ, ಕೊಂಬು ಕಹಳೆ, ಜಾನಪದ ಕಲಾಪ್ರದರ್ಶನ, ವಿಚಾರ ಸಂಕಿರಣ ನಡೆಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ನಾರಾಯಣ ಮಾತನಾಡಿ “ಪೂರ್ವದಲ್ಲಿ ಗ್ರಾಮಗಳಲ್ಲಿ ಶುಭ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಸೇರಿದಂತೆ ಜಾತ್ರಾ ಮಹೋತ್ಸವಗಳಲ್ಲಿ ಗ್ರಾಮೀಣ ಜನಪದರು ತಮಟೆ, ಡೋಲು ಬಡಿದು ಸಂಭ್ರಮಿಸುತ್ತಿದ್ದರು. ಹಿರಿಯ ಕಲಾವಿದರ ಕಲೆ, ಕಲಾವಿದರ ನೃತ್ಯ ಇಂದಿನ ಯುವಪೀಳಿಗೆ ನಾಚಿಸುವಂತೆ ಮಾಡಿದೆ. ಯುವಜನತೆ ನಾಡಿನ ಕಲೆ, ಸಾಹಿತ್ಯ, ಆಟೋಟಗಳನ್ನು ಮರೆತಿದ್ದಾರೆ. ಉಳಿದಿರುವ ಕಲಾವಿದರು ನುಡಿಸುವ, ಬಾರಿಸುವ ಕಲೆಯನ್ನು ಯುವಪೀಳಿಗೆ ಕಲಿಯಬೇಕು” ಎಂದರು.
ರಂಗಧರ್ಮ ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿ ಪ್ರದೀಪ್‍ತಿಪಟೂರು, ಸಿ.ಎಂ.ಸುರೇಶ, ರಂಗನಿರ್ದೇಶಕ ಸಾಂಬಶಿವ ದಳವಾಯಿ, ವಿಶ್ವನಾಥ ಎನ್.ಅಮಾಸ, ತಾಲ್ಲೂಕು ಕಸಾಪ ಡಿ.ಎನ್.ಕೃಷ್ಣಾರೆಡ್ಡಿ, ಕಾಲೇಜಿನ ಪ್ರಾಧ್ಯಾಪಕಿ ತಾಜುನ್ನೀಸಾ, ಪೂರ್ಣಂಕುವರ್, ಪ್ರಾಧ್ಯಾಪಕ ನಾಗರಾಜ್, ಎಲ್.ಶ್ರೀನಿವಾಸ್, ಒಬಳರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur