ಬಾಗೇಪಲ್ಲಿ PLD Bank ಗೆ ಅವಿರೋಧ ಆಯ್ಕೆ

- Advertisement -
- Advertisement -

Bagepalli : ಬಾಗೇಪಲ್ಲಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮಾಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶ್ರೀನಿವಾಸರೆಡ್ಡಿ ಮತ್ತು ಬಿ.ಎ. ನರಸಿಂಹಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರೇಮ್‌ಕುಮಾರ್ ತಿಳಿಸಿದ್ದಾರೆ.

ಬ್ಯಾಂಕ್‌ನ 14 ನಿರ್ದೇಶಕ ಸ್ಥಾನಗಳಿಗೆ ಎರಡು ತಿಂಗಳ ಹಿಂದೆ ಚುನಾವಣೆ ನಡೆದು 11 ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದರು. ಉಳಿದಂತೆ ಚಾಕವೇಲು, ಬಿಳ್ಳೂರು, ನಾರೇಮದ್ದೇಪಲ್ಲಿ ಕ್ಷೇತ್ರಗಳಿಗೆ ಫೆಬ್ರವರಿ 16 ರಂದು ಚುನಾವಣೆ ನಡೆಯಿತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ. ಶ್ರೀನಿವಾಸ್, ಸದಸ್ಯ ನಂಜುಂಡಪ್ಪ, ಗಡ್ಡಂ ರಾಮೇಶ್, ಮಾಜಿ ಅಧ್ಯಕ್ಷ ಬಿ.ಆರ್. ನರಸಿಂಹನಾಯ್ಡು, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಿಜಾಮುದ್ದೀನ್ (ಬಾಬು), ಮನ್ಸೂರ್, ಸೂರ್ಯನಾರಾಯಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!