Bagepalli : ಬಾಗೇಪಲ್ಲಿ ಪಟ್ಟಣದ ಜನರಿಗೆ ಇ ಸ್ವತ್ತು, ನಿರಾಕ್ಷೇಪಣಾ ಪತ್ರ, ಸ್ವಚ್ಛತೆ, ಹೊಲಿಗೆ ಯಂತ್ರ ವಿತರಿಸಿಲ್ಲ ಎಂದು ಆರೋಪಿಸಿ ನಿವಾಸಿಗಳು ಗುರುವಾರ ಪುರಸಭೆ ಕಚೇರಿಗೆ (Municipal Office) ಬೀಗ ಹಾಕಿ ಪ್ರತಿಭಟನೆ (Protest) ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಗಡ್ಡಂರಮೇಶ್ ” ಪಟ್ಟಣದಲ್ಲಿ ಸ್ವಚ್ಛತೆ, ಬೀದಿದೀಪ, ನಿವೇಶನ ಹಂಚಿಕೆ ಮಾಡಿಲ್ಲ. ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ವಿದ್ಯಾರ್ಥಿವೇತನ ಹಂಚಿಕೆ ಮಾಡಿಲ್ಲ. ಜನರು ಕಚೇರಿಗೆ ಅಲೆದಾಡುತ್ತಿದ್ದರೂ ಕೆಲಸ ಮಾಡುತ್ತಿಲ್ಲ.ಪೌರಕಾರ್ಮಿಕರಿಗೆ ವೇತನ ನೀಡಿಲ್ಲ. ಇಂದಿರಾ ಕ್ಯಾಂಟೀನ್‌ಗೆ ಬಂದಿರುವ ಪರಿಕರ ತುಕ್ಕು ಹಿಡಿದಿವೆ. ಪಟ್ಟಣದಲ್ಲಿ ಸಮರ್ಪಕವಾಗಿ ರಸ್ತೆ ಇಲ್ಲ. ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗಿಲ್ಲ. ಜನಪರ ಕೆಲಸ ಮಾಡದ ಮುಖ್ಯಾಧಿಕಾರಿಯನ್ನು ವರ್ಗಾವಣೆ ಆಗಬೇಕು” ಎಂದು ಹೇಳಿದರು.
ಮುಖ್ಯಾಧಿಕಾರಿ ರುದ್ರಮ್ಮಶರಣಯ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ಕಾರಣ ಪ್ರತಿಭಟನಾ ಸ್ಥಳಕ್ಕೆ ಬರಲು ಆಗಿಲ್ಲ. ಅವರು ಕರೆಮಾಡಿ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಲಾಗುವುದು ಎಂದು ಮನವಿ ಮಾಡಿದರೂ, ಪ್ರತಿಭಟನಾಕಾರರು ಒಪ್ಪದೇ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು. ಕಚೇರಿಗೆ ಬೀಗ ಹಾಕಿರುವುದರಿಂದ ಅಧಿಕಾರಿ, ಸಿಬ್ಬಂದಿ ಪುರಸಭೆಯ ಹೊರಗೆ ಕಾಲ ಕಳೆದರು.
ಪ್ರತಿಭಟನೆಯಲ್ಲಿ ನರೇಶ, ರವಿ, ಮನು, ಸನಾ, ಎಂ.ಮೂರ್ತಿ, ಕುಮಾರ್, ನರಸಿಂಹಪ್ಪ, ಗೋಪಾಲ, ಶಾಂತಮ್ಮ, ಪ್ರಮಿಳಾ, ಅಖಿಲ, ವರಲಕ್ಷ್ಮಿ, ಲಕ್ಷ್ಮಿ, ಪರ್ವೀನಾ ಮತಿತ್ತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur