Bagepalli : ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ 44ರಲ್ಲಿನ ಪೂಲವಾರಿಪಲ್ಲಿ ಕ್ರಾಸ್‌ನ ತಿರುವಿನಲ್ಲಿ ಚಲಿಸುತ್ತಿದ್ದ ಸತ್ಯಸಾಯಿ ಶಾಲಾ ಬಸ್‌ಗೆ ಬುಧವಾರ ಬೆಳಗ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ 13 ಮಕ್ಕಳಿಗೆ ಸಣ್ಣಪುಟ್ಟ (School Bus Lorry Accident) ಗಾಯವಾಗಿದೆ.
ಬಸ್‌ನಲ್ಲಿದ್ದ ಹೇಮಂತ್, ಸುಸ್ಮಿತಾ, ವರ್ಷಿಕಾ, ಸುದೀಪ್ ಹಿಮಬಿಂದು, ಸಾನ್ನಿಕಾ, ಲಿಖಿತ, ಆರಣ್ಯ, ಆಶ್ವಿನ್ ಕುಮಾರ್, ತೇಜಸ್, ನಿಹಾನ್, ಅಶ್ವಿನ್ ಸೇರಿದಂತೆ 13 ವಿದ್ಯಾರ್ಥಿಗಳಿಗೆ ತಲೆ, ಕೈ, ಕಾಲುಗಳಿಗೆ, ಎದೆ, ಸೊಂಟಕ್ಕೆ ಗಾಯವಾಗಿದೆ.
ಗಾಯಾಳು ಮಕ್ಕಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ತಾಲ್ಲೂಕು ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟರಾಮಪ್ಪ, ಪರಗೋಡು ಪಿಡಿಒ ನಾಗಮಣಿ ಆಸ್ಪತ್ರೆಗೆ ಭೇಟಿ ನೀಡಿದರು. ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ಅಫಘಾತದ ಸ್ಥಳ ಹಾಗೂ ಆಸ್ಪತ್ರೆ ಭೇಟಿನೀಡಿ ಪರಿಶೀಲನೆ ಮಾಡಿದರು.