Bagepalli : ಬಾಗೇಪಲ್ಲಿ ಪುರಸಭಾ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ನಿವೃತ್ತ ನೌಕರರ ಸಂಘ, ಪುರಸಭೆ ಆಶ್ರಯದಲ್ಲಿ ಸೋಮವಾರ ಹಿರಿಯ ನಾಗರಿಕರ ದಿನಾಚರಣೆ (Senior Citizen Day) ಕಾರ್ಯಕ್ರಮ ಹಮ್ಮಿಕೊಳ್ಳಾಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಜೆ.ರಂಗಸ್ವಾಮಿ “ಸಮಾಜಕ್ಕೆ ಹಿರಿಯ ನಾಗರಿಕರ ಕೊಡುಗೆ ಇದೆ. ಹಿರಿಯರ ತಮ್ಮ ಅನುಭವದ ಮಾತುಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿದಾಗ, ಹಿರಿಯರ ಮಾತುಗಳಿಗೆ ಗೌರವ ನೀಡುತ್ತಿಲ್ಲ. ಇದರಿಂದ ಬೇಸತ್ತ ವೃದ್ದರು ವೃದ್ಧಾಶ್ರಮಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. 2007ರ ಹಿರಿಯ ನಾಗರಿಕರ ಕಾಯ್ದೆ ಪ್ರಕಾರ ಹಿರಿಯರನ್ನು ಗೌರವದಿಂದ, ಮನೆಯಲ್ಲಿ ನೋಡಿಕೊಳ್ಳದ ಹಾಗೂ ದೌರ್ಜನ್ಯಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಕಾನೂನು ಇದೆ. ಗೌರವದಿಂದ ಕಾಣದ ಮಕ್ಕಳ ವಿರುದ್ಧ ಶಿಕ್ಷೆ ಹಾಗೂ ದಂಡ ಇದೆ” ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ರುದ್ರಮ್ಮಶರಣಯ್ಯ, ನಂಜುಂಡಪ್ಪ, ರಾಮಾಂಜಿ, ಪ್ರಸನ್ನಕುಮಾರ್, ಮಂಜುನಾಥ್, ವೆಂಕಟನಾರಾಯಣ, ಶ್ರೀನಿವಾಸ್, ನಾಗಭೂಷಣನಾಯಕ್, ಬಾಲುನಾಯಕ್, ವೆಂಕಟರೆಡ್ಡಿ, ಎಸ್.ಮುನಿರಾಮಯ್ಯ, ಆಂಜಿನಪ್ಪ, ಮುನೀರ್ ಅಹ್ಮದ್, ಕೃಷ್ಣಪ್ಪ, ಅಥಾವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur