Bagepalli : ಬಾಗೇಪಲ್ಲಿ ಮಿನಿ ವಿಧಾನಸೌಧದ ಆವರಣದಲ್ಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಮಳಿಗೆಯ ಮುಂದೆ ಬಾಗೇಪಲ್ಲಿ, ಗುಡಿಬಂಡೆ (Gudibande) ಹಾಗೂ ಚೇಳೂರಿನ (Chelur) 3 ತಾಲ್ಲೂಕಿನ ರೈತರು (Farmer) ಯೂರಿಯಾ (Urea) ಪಡೆಯಲು ಹರಸಾಹಸಪತ್ತಿದ್ದಾರೆ.
ತಾಲ್ಲೂಕಿನಾದ್ಯಂತ ಸತತವಾಗಿ 20 ದಿನಗಳಿಂದ ಮಳೆ ಸುರಿಯುತ್ತಿದ್ದು ಕೃಷಿ ಬೆಳೆಗಳಿಗೆ ಅಗತ್ಯವಾಗಿ ಯೂರಿಯಾ ಸಿಂಪಡಣೆ ಮಾಡಬೇಕು. ಇದರಿಂದ ತಾಲ್ಲೂಕಿಗೆ 150 ಟನ್ ಯೂರಿಯಾ ಅವಶ್ಯಕತೆ ಇದ್ದು ಸೋಮವಾರ 360 ಮೂಟೆ ಯೂರಿಯಾ ಬಂದಿದೆ. ಆದ್ದರಿಂದ ಒಬ್ಬ ರೈತರಿಗೆ ತಲಾ 2 ಮೂಟೆ ಯೂರಿಯಾ ವಿತರಣೆ ಮಾಡಲಾಗುತ್ತಿದೆ. ಯೂರಿಯಾ ಮೂಟೆಗಳ ಪ್ರಸ್ತಾವ ಇಲಾಖೆಗೆ ಸಲ್ಲಿಸಲಾಗಿದೆ, ಎಂದು ಕೃಷಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಎಸ್.ಶ್ರೀನಿವಾಸ್ ತಿಳಿಸಿದರು.