- Advertisement -
- Advertisement -
- Advertisement -
- Advertisement -
Bagepalli : ಈಸ್ಟ್ ಪಾಯಿಂಟ್ ಆಸ್ಪತ್ರೆ (East Point Hospital) ಹಾಗೂ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ (Yallampalli) ಪಂಚಾಯಿತಿ ವ್ಯಾಪ್ತಿ ಆಚೆಪಲ್ಲಿ ಕ್ರಾಸ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ (Free health camp) ನಡೆಸಲಾಯಿತು.
ಶಿಬಿರದಲ್ಲಿ ರೈತ ಸಂಘದ ಅಧ್ಯಕ್ಷ ಎ.ವೆಂಕಟರಾಮಯ್ಯ ಮಾತನಾಡಿ “ಗ್ರಾಮೀಣ ಭಾಗದಲ್ಲಿ ವೃದ್ಧರು, ಮಹಿಳೆಯರು, ಕೂಲಿ ಕಾರ್ಮಿಕರು ಕೆಲಸದ ಒತ್ತಡದಿಂದ ಬಹುತೇಕವಾಗಿ ಆರೋಗ್ಯ ನಿರ್ಲಕ್ಷ್ಯ ತೋರುವುದು ಹೆಚ್ಚು. ಆರೋಗ್ಯ ಇದ್ದರೆ ಏನೂ ಬೇಕಾದರೂ ಸಂಪಾದನೆ ಮಾಡಬಹುದು. ಹೀಗಾಗಿ ಪ್ರತಿಯೊಬ್ಬರು ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು” ಎಂದು ತಿಳಿಸಿದರು.
ವೈದ್ಯರು, ರೈತ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿದರು.
For Daily Updates WhatsApp ‘HI’ to 7406303366
- Advertisement -