Bangarapete : ಬಂಗಾರಪೇಟೆಯ ಐನೋರಹೊಸಹಳ್ಳಿಯಲ್ಲಿ (inorahosahalli) ಕಾರ್ತಿಕ ಮಾಸದ ಅಂಗವಾಗಿ ರಾಧಾ ರುಕ್ಮಿಣಿ ಸಮೇತ ವೇಣುಗೋಪಾಲ ಸ್ವಾಮಿಯ (Venugopala Swamy Temple) ಜೀರ್ಣೋದ್ಧಾರ ಮತ್ತು ಕುಂಬಾಭಿಷೇಕವನ್ನು (Jeernodhaara) ಭಕ್ತರು ಸೋಮವಾರ ಶ್ರದ್ಧಾಭಕ್ತಿಯಿಂದ ನೆರೆವೇರಿಸಿದರು. ಕಾರ್ಯಕ್ರಮ ದಲ್ಲಿಸಂಪ್ರೋಕ್ಷಣೆ, ನೂತನ ವಿಗ್ರಹ ಮತ್ತು ಪುನರ್ ಪ್ರಾಣ ಪ್ರತಿಷ್ಠಾಪನಾ ಕಾರ್ಯ,ಗಣಪತಿ ಪ್ರಾರ್ಥನೆ, ವೇದಪಾರಾಯಣ, ವೇದಿಕಾರ್ಚನೆ, ಅಷ್ಠಬಂಧ, ನೂತನ ಸ್ಥಿರಬಿಂಬ ಪ್ರತಿಷ್ಠೆ ಮತ್ತು ಮಹಾ ಕುಂಬಾಭಿಷೇಕ ಮಹೋತ್ಸವ ಅದ್ದೂರಿಯಾಗಿ ನಡೆದವು.
ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನ ನಿರ್ಮಾಣ ಸೇವಾ ಸಮಿತಿ ಅಧ್ಯಕ್ಷ ಜಗದೀಶ್ ಎಚ್. “ಕಾಲಕ್ರಮೇಣ ದೇವಸ್ಥಾನ ಶಿಥಿಲಗೊಂಡ ಕಾರಣ ಭಕ್ತಾದಿಗಳ ಸಹಕಾರದಿಂದ ದೇವಾಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗಿದ್ದು ಎತ್ತರದ ಜಗುಲಿಯ ಮೇಲೆ ನಿರ್ಮಿಸಲಾಗಿದ್ದ ದೇವಾಲಯವು ಪಶ್ಚಿಮಾಭಿಮುಖವಾಗಿ ಸ್ಥಾಪಿಸಲಾಗಿದೆ, ದೇವಾಲಯದ ಮುಂಭಾಗದಲ್ಲಿ ಗರುಡಗಂಬವಿದ್ದು, ಐತಿಹಾಸಿಕ ಕಲೆ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ವೇಣುಗೋಪಾಲ ಸ್ವಾಮಿ ಗರ್ಭ ಗುಡಿಯ ಪಕ್ಕದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಗೋಪಾಲ್, ಕೃಷ್ಣಪ್ಪ, ಮುನಿರತ್ನಮ್ಮ, ರಮೇಶ್, ಪ್ರಕಾಶ್, ಮಂಜು, ರಾಜಣ್ಣ ಶೆಟ್ಟಿ, ಬೂದಿಕೋಟೆ ಗೋಪಾಲ್ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.