Chikkaballapur : ಚಿಕ್ಕಬಳ್ಳಾಪುರ ನಗರದ K.V. Campus ನಲ್ಲಿ K.V ಶಿಕ್ಷಣ ಸಂಸ್ಥೆಯ BPEd ಕಾಲೇಜು ಸಹಯೋಗದಲ್ಲಿ ಶನಿವಾರ ಚಿಕ್ಕಬಳ್ಳಾಪುರ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (Backward Class Welfare Department)(BCWD)ವ್ಯಾಪ್ತಿಯ ಎಂಜಿನಿಯರಿಂಗ್ (Engineering) ಮತ್ತು ವೃತ್ತಿಪರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳ ಅಂತರ್ ವಸತಿನಿಲಯಗಳ ಕ್ರೀಡೋತ್ಸವ (Sports Meet) ನಡೆಯಿತು. ಕ್ರೀಡೋತ್ಸವದಲ್ಲಿ ವಾಲಿಬಾಲ್ (Volley Ball), ಕ್ರಿಕೆಟ್ (Cricket), ರಿಲೇ (Relay), 100 ಮತ್ತು 200 ಮೀಟರ್ ಓಟ, ಉದ್ದಜಿಗಿತ (Long Jump) ಸ್ಪರ್ಧೆಗಳು ನಡೆದವು.
ಸೋಲು, ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ, ಉತ್ತಮ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳು ಅಗತ್ಯ. ಕ್ರೀಡೆ . ಒತ್ತಡವನ್ನು ನಿವಾರಿಸಿ ಮನಸ್ಸು ಹಗುರ ಮಾಡಲು ನೆರವಾಗುತ್ತದೆ ಎಂದು ಪ್ರಾಂಶುಪಾಲ ವೆಂಕಟೇಶ್ ತಿಳಿಸಿದರು.
ಡಿ.ವೈ. ಮಂಜುನಾಥ್, ವೇಣು ಹಾಗು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur