Chikkaballapur : ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷರಾಗಿ (BJP District President) ಟಿ.ರಾಮಲಿಂಗಪ್ಪ ಪುನರಾಯ್ಕೆ ಆಗಿದ್ದಾರೆ.ರಾಮಲಿಂಗಪ್ಪ 2020ರ ಜನವರಿಯಲ್ಲಿ ಮೊದಲ ಬಾರಿಗೆ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು ಮತ್ತೆ ಈಗ ಎರಡನೇ ಬಾರಿಗೂ ಅವರೇ ಅಧ್ಯಕ್ಷ ಚುಕ್ಕಾಣಿ ಹಿಡಿದಿದ್ದಾರೆ.
ರಾಜ್ಯ ವೀಕ್ಷಕರು ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ಸಭೆ ನಡೆಸಿ ಐದು ಮಂದಿಯ ಹೆಸರನ್ನು ರಾಜ್ಯ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದರು. ಲೋಕಸಭೆ ಚುನಾವಣೆ, ಜಾತಿ ಲೆಕ್ಕಾಚಾರದಲ್ಲಿ ಅಳೆದು ತೂಗಿ ಬಿಜೆಪಿ ರಾಜ್ಯ ಘಟಕವು ರಾಮಲಿಂಗಪ್ಪ ಅವರನ್ನೇ ಮತ್ತೆ ಮುಂದುವರಿಸಲು ತೀರ್ಮಾನಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.