Chintamani : ಚಿಂತಾಮಣಿ ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 1 ರಲ್ಲಿರುವ ಸರ್ಕಾರಿ ಹಿರಿಯ ಉರ್ದುಪಾಠ ಶಾಲೆ, ವೆಂಕಟಗಿರಿ ಕೋಟೆ ಮತ್ತು ವಾರ್ಡ್ ಸಂಖ್ಯೆ 2 ರಲ್ಲಿರುವ ನೂತನ ಸರ್ಕಾರಿ ಪ್ರೌಢಶಾಲೆ, ವೆಂಕಟಗಿರಿ ಕೋಟೆ ಹಾಗೂ ವಾರ್ಡ್ ಸಂಖ್ಯೆ-2 ರಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಖಾಲಿ ಇರುವ ಅಡುಗೆ ಸಹಾಯಕರನ್ನು (Call For Cooking Helpers Application) ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಜೂಲೈ 26 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು ಮತ್ತು ಹೆಚ್ಚಿನ ಮಾಹಿತಿಗೆ ಚಿಂತಾಮಣಿ ನಗರಸಭೆ ಕಚೇರಿಯ ಡೇ-ನಲ್ಮ್ ಶಾಖೆಗೆ ಅಥವಾ 08154- 252117 ಗೆ ಸಂಪರ್ಕಿಸಬಹುದು ಎಂದು ಚಿಂತಾಮಣಿ ನಗರಸಭೆ ಪೌರಾಯುಕ್ತರು ವರದಿಯಲ್ಲಿ ತಿಳಿಸಿದ್ದಾರೆ.