Bagepalli : ಬಾಗೇಪಲ್ಲಿಯಿಂದ ಚೇಳೂರು ಕಡೆಗೆ ಬರುತ್ತಿದ್ದಾಗ ಪಾತಪಾಳ್ಯ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಣಿವೆಗೆ ಬಿದ್ದು ಪಲ್ಟಿಯಾಗಿದೆ (Car Accident). ಕಾರಿನಲ್ಲಿದ್ದ ಐವಾರ್ಲಪಲ್ಲಿ ರಮೇಶ್ ಮತ್ತು ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಾತಪಾಳ್ಯ ಪೋಲಿಸ್ ಠಾಣೆ ಪ್ರಭಾರ ಸಬ್ ಇನ್‌ಸ್ಟೆಕ್ಟರ್ ಜಿ.ಜಿ.ನರಸಿಂಹನಾಯ್ಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.