Gauribidanur : ಸೋಮವಾರ ರಾಜ್ಯ ಹೆದ್ದಾರಿ 9 – ಗೌರಿಬಿದನೂರು ತಾಲ್ಲೂಕು ತೊಂಡೆಬಾವಿ ಹೋಬಳಿ, ಬಂದಾರ್ಲಹಳ್ಳಿ ಸಮೀಪ ಸಂಜೆ ಕಾರು ಹಾಗೂ ಬೈಕ್ ನಡುವೆ ಅಪಘಾತ (Accident) ಸಂಭವಿಸಿದ್ದು, ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟವರು ಬಂದಾರ್ಲಹಳ್ಳಿ ಗ್ರಾಮದ ನಿವೃತ್ತ ಪೊಲೀಸ್ ಅಧಿಕಾರಿ ಹನುಮಂತರಾಯಪ್ಪ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಲಕ್ಷ್ಮಿನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.