Chinatamani : ಚಿಂತಾಮಣಿ ತಾಲ್ಲೂಕಿನ ಹಲವಾರು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಮಂಗಳವಾರ ಸಚಿವ ಡಾ.ಎಂ.ಸಿ.ಸುಧಾಕರ್ (Dr M C Sudhakar) ಚೆಕ್ ಡ್ಯಾಂಗಳನ್ನು (Check dam) ಪರಿಶೀಲನೆ (Inspection)ಮಾಡಿ ಹಾಗೂ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.
ಈ ಸಂದರ್ಭದಲ್ಲಿ ಮಾತಾನಾಡಿದ ಸಚಿವ ಡಾ.ಎಂ.ಸಿ.ಸುಧಾಕರ್ “ಅಟಲ್ ಭೂಜಲ ಯೋಜನೆಯಡಿ ಗ್ರಾಮ ಪಂಚಾಯಿತಿ ಗೊಂದು ಚೆಕ್ ಡ್ಯಾಂ ಹಿಂದೆ ಅನುಮೋದನೆಯಾಗಿದ್ದು, ಅವೈಜ್ಞಾನಿಕವಾಗಿ ಸ್ಥಳಗಳನ್ನು ಗುರುತಿಸದ ಕಾರಣ ತಡೆಹಿಡಿಯಲಾಗಿತ್ತು. ಮಂಗಳವಾರ ಎಲ್ಲ ಸ್ಥಳಗಳನ್ನು ಪರಿಶೀಲಿಸಿ ಕೆಲವನ್ನು ಬದಲಾಯಿಸಿ ಮಂಜೂರಾತಿ ನೀಡಲಾಗಿದೆ. ತಾಲ್ಲೂಕಿನ ನಲ್ಲರಾಳ್ಳಪಲ್ಲಿ ಬಳಿ ಹೊಸ ಚೆಕ್ ಡ್ಯಾಂ ನಿರ್ಮಾಣಕ್ಕಾಗಿ ₹ 3.5 ಕೋಟಿ, 2015ರಲ್ಲಿ ಅಧಿಕ ಮಳೆ ಬಂದು ಕೊಚ್ಚಿಕೊಂಡು ಹೋಗಿದ್ದ ಬ್ರಾಹ್ಮಣರಹಳ್ಳಿ ರಸ್ತೆಯ ನೆಲಹಂತದ ಸೇತುವೆ ಹಾಗೂ ಮಾದಮಂಗಲ-ಯಸಗಲಹಳ್ಳಿ ರಸ್ತೆಯಲ್ಲಿ ಕೊಚ್ಚಿಹೋಗಿದ್ದ ಸೇತುವೆಯನ್ನು ಮರು ನಿರ್ಮಾಣ ಮಾಡಲು ಒಟ್ಟು ₹ 5 ಕೋಟಿ ಅನುದಾನ ಮಂಜೂರಾಗಿದೆ” ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.