Chelur : ಚೇಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜನವರಿ 12 ರಂದು ಜಿಲ್ಲಾ ಮತ್ತು ಚೇಳೂರು ತಾಲ್ಲೂಕು ಬ್ರಾಹ್ಮಣ ಸಭಾ, ಅಕ್ಷಯ ಫೌಂಡೇಶನ್, ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು (MS Ramaih Medical College) ಹಾಗೂ ವಿವಿದ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ (Free Health Camp) ಹಮ್ಮಿಕೊಳ್ಳಲಾಗಿದ್ದು ಸಾಮಾನ್ಯ ರೋಗ, ಮೂತ್ರಪಿಂಡದ ಶಸ್ತ್ರ ಚಿಕಿತ್ಸೆ, ನರರೋಗ, ಸುಟ್ಟ ಗಾಯ, ಮಕ್ಕಳ ಶಸ್ತ್ರ ಚಿಕಿತ್ಸೆ, ಮೂಳೆ, ಕ್ಯಾನ್ಸರ್, ಹೃದಯ, ಸ್ತ್ರೀ ರೋಗ ಹೀಗೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಶಿಬಿರದಲ್ಲಿ ಪರೀಕ್ಷೆಗಳು ನಡೆಯಲಿವೆ.
ಆರೋಗ್ಯ ಶಿಬಿರದ ಅಂಗವಾಗಿ ಮಂಗಳವಾರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಎಂ.ಎಸ್ ರಾಮಯ್ಯ ಆಸ್ಪತ್ರೆಯ ಜನ ಸಂಪರ್ಕ ಅಧಿಕಾರಿ ಲಕ್ಷ್ಮಿನಾರಾಯಣ, ನಾಗಭೂಷಣ್, ಪಿ.ಪ್ರಕಾಶ್, ಮುನಿರಾಮಯ್ಯ, ವೇಣುಗೋಪಾಲ, ರಘುವೀರ ಶರ್ಮ, ಮುಖ್ಯ ಶಿಕ್ಷಕ ಜಿಲಾನ್ ಬಾಷಾ ಹಾಗೂ ಬ್ರಾಹ್ಮಣ ಸಭಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.