Chelur : ಚೇಳೂರಿನ ಕೋದಂಡರಾಮಸ್ವಾಮಿ ರಥೋತ್ಸವ (KodandaRama Swamy Rathotsava) ಮಂಗಳವಾರ ವಿಜೃಂಭಣೆಯಿಂದ ನಡೆಸಲಾಯಿತು. ರಥೋತ್ಸವಕ್ಕೆ ತಹಶೀಲ್ದಾರ್ ಎ.ವಿ. ಶ್ರೀನಿವಾಸಲು ನಾಯ್ಡು ಮತ್ತು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ( S N Subbareddy) ಹಾಗೂ ಗಣ್ಯರು ರಥಕ್ಕೆ ಚಾಲನೆ ನೀಡಿದರು.
ರಥೋತ್ಸವ ಸಲುವಾಗಿ ದೇವಸ್ಥಾನದಲ್ಲಿ ವಿವಿಧ ಪೂಜಾಕಾರ್ಯ, ಮೂಲ ದೇವರಿಗೆ ಪಂಚಾಮೃತ ಅಭಿಷೇಕ ನಡೆಯಿತು. ಸೀತಾ ರಾಮ ಲಕ್ಷ್ಮಣ ಸಮೇತ ಆಂಜನೇಯ ದೇವರ ಮೂರ್ತಿಗಳನ್ನು ರಥದಲ್ಲಿ ಕೂರಿಸಿ ಪ್ರಮುಖ ರಥ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಡೊಳ್ಳು ಕುಣಿತ, ವೀರಗಾಸೆ ನೋಡುಗರ ಕಣ್ಮನ ಸೆಳೆಯಿತು.
ಭಕ್ತರು ರಥಕ್ಕೆ, ಬಾಳೆಹಣ್ಣು ಹೂವು ದವನ ಎಸೆದರು. ಆಂಜನೇಯ ಸಂಘ, ಮಾರುತಿ ಸೇವೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಅನ್ನ ಸಂತರ್ಪನೆ, ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ವಿತರಿಸಲಾಯಿತು.