Chelur : ಚೇಳೂರು ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ನಾರೇಮದ್ದೆಪಲ್ಲಿ (Naremaddepalli) ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮ (Janspandana) ನಡೆಸಲಾಯಿತು.ಜನಸ್ಪಂದನಾ ಕಾರ್ಯಕ್ರಮದಲ್ಲಿ ಕಂದಾಯ ಕೃಷಿ, ಗ್ರಾಮೀಣ ಭಾಗದ ರಸ್ತೆ, ವಿಧವಾ ವೇತನ, ವೃದ್ಧರು ಹಾಗೂ ರೈತರಿಗೆ ಸಂಬಂಧಿಸಿದ 100ಕ್ಕೂ ಹೆಚ್ಚು ಅರ್ಜಿ ನೊಂದಣಿಯಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಮಾತನಾಡಿ “ಬಾಗೇಪಲ್ಲಿ ಮತ್ತು ಚೇಳೂರು ತಾಲ್ಲೂಕಿನ ಭಾಗಗಳಲ್ಲಿ ಬಾಲ್ಯವಿವಾಹ ಮತ್ತು ಪೋಕ್ಸೊ ಪ್ರಕರಣ ದಾಖಲಾಗಿದೆ. ಇಂತಹ ಅಪರಾಧ ನಡೆಯದಂತೆ ಪೋಷಕರು ಕ್ರಮಕೈಗೊಳ್ಳಬೇಕು. ಮಕ್ಕಳನ್ನು ಸಂಸ್ಕಾರದಿಂದ ಬೆಳೆಸಬೇಕು” ಎಂದು ತಿಳಿಸಿ ತಾಲ್ಲೂಕಿನ ನಾರೇಮದ್ದೆಪಲ್ಲಿ ಗ್ರಾಮದಲ್ಲಿ ₹70 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ, ₹30 ಲಕ್ಷ ವೆಚ್ಚದ ನಾರೇಮದ್ದೆಪಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡಿದರು.
ತಹಶೀಲ್ದಾರ್ ಶ್ರೀನಿವಾಸ ನಾಯುಡು, ಉಪ ತಹಶಿಲ್ದಾರ್ ಈಶ್ವರ್, ಪಿ.ಆರ್.ಜನಾರ್ದನ, ಅಮರ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ವೆಂಕಟಾಚಲಪತಿ, ಉತ್ತಣ್ಣ ಉಪಸ್ಥಿತರಿದ್ದರು.