Chelur : ಚೇಳೂರಿನ ಮಡಿವಾಳ ಮಾಚಿದೇವರ ಸಮಾಜದವರು ಭಾನುವಾರ ಪ್ರತಿ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ತಮಟೆ ವಾದ್ಯಗಳೊಂದಿಗೆ ಗ್ರಾಮ ದೇವತೆ ಚೌಡೇಶ್ವರಿ ಮೆರವಣಿಗೆ ನಡೆಸಿ ಉಬ್ಬು ದ್ಯಾವರವನ್ನು ಸಂಭ್ರಮದಿಂದ ಆಚರಿಸಿದರು.
ಕೃಷಿ ಮಾರುಕಟ್ಟೆ ಕಾಂಪೌಂಡ್‌ನಲ್ಲಿ ಗಂಗಮ್ಮನ ಗುಡಿಯನ್ನು ನಿರ್ಮಿಸಿದ್ದು, ಪ್ರತಿ ವರ್ಷ ಉಬ್ಬು ದ್ಯಾವರ ಆಚರಣೆ ನಡೆಯುತ್ತದೆ. ಚೌಡೇಶ್ವರಿ ದೇವಿಯನ್ನು ಹೊತ್ತು ಪಟ್ಟಣದ ಆಂಜನೇಯ ದೇವಸ್ಥಾನ ಬಳಿ ಹಾಗೂ ಪ್ರಮುಖ ರಥ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ಬಿ.ಎಸ್.ಸುರೇಶ್, ಮುಖಂಡ ನಾಗರಾಜ್, ಟಿ.ಶ್ರೀನಿವಾಸ್, ಇಸ್ತ್ರೀ ವೆಂಕಟರವಣಪ್ಪ, ಟಪ್ಪಲು ವೆಂಕಟರವಣಪ್ಪ, ಸಾಕಲ ಪೆದ್ದೇಯಪ್ಪ, ಮಲ್ಲಪ್ಪ, ಡ್ರೈವರ್ ಶ್ರೀನಿವಾಸ್, ಜಿ.ವಿ.ಸುರೇಂದ್ರ ಜಾಲಾರಿ, ಕೆ.ಸಹದೇವರೆಡ್ಡಿ, ಕೆ.ಜಿ.ವೆಂಕಟರವಣ, ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು.