Malur : ಮಾಲೂರು ತಾಲ್ಲೂಕಿನ ಐತಿಹಾಸಿಕ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇಗುಲದಲ್ಲಿ (Chikka Tirupathi Sri Prasanna Venkateshwara Swamy Temple) ಮಂಗಳವಾರ ಹುಂಡಿ ಎಣಿಕೆ ಕಾರ್ಯ (Hundi Counting) ನಡೆಸಲಾಯಿತು.
ಹುಂಡಿಯಲ್ಲಿ 50 ಗ್ರಾಂ ಚಿನ್ನ, 545 ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು ₹64.46 ಲಕ್ಷ ಸಂಗ್ರಹವಾಗಿದ್ದು ಈ ಹಣವನ್ನೆಲ್ಲ ದೇವಾಲಯದ ಖಾತೆಗೆ ಜಮಾ ಮಾಡಲಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ತಿಳಿಸಿದರು.
ತಹಶೀಲ್ದಾರ್ ರಮೇಶ್, ಹರಿಪ್ರಸಾದ್, ಸಂಪತ್, ಶ್ರೀಪತಿ, ಪದ್ಮಾವತಿ, ಚಲುವಸ್ವಾಮಿ, ವೆಂಕೊಬರಾವ್, ರೂಪೇಂದ್ರ, ಹರೀಂದ್ರ ಗೋಪಾಲ್, ನಾಗರಾಜ್, ಪ್ರಭಾಕರ್, ವಿಜಯ್ ಕುಮಾರ್, ಕೇಶವ್ ಮುರ್ತಿ, ವೆಂಕಟೇಶ್, ಶ್ರೀನಿವಾಸ್, ದೇವರಾಜ್, ಚಂದ್ರಯ್ಯ, ಜಯಪಾಲ್, ರಾಮದಾಸ್, ಮಂಜುನಾಥ್, ಚಂದ್ರಶೇಖರ್, ಲಕ್ಷಮ್ಮ, ಮಂಜಮ್ಮ, ರಾಜಮ್ಮ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಶಾಲಾ ವಿದ್ಯಾರ್ಥಿಗಳು ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.