Chikkaballapura : ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ವಿಶ್ವಕರ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್ ಅಮರೇಶ್ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲಾ ವಿಶ್ವರ್ಮ ಸಂಘದ ಅಧ್ಯಕ್ಷ ನವೀನ ಕುಮಾರ್, ಕಾರ್ಯದರ್ಶಿ ಜಯಚಂದ್ರ, ಖಜಾಂಚಿ ಆನಂದ್, ಮಂಜುನಾಥ್, ಜಿಲ್ಲಾ ವಿಶ್ವರ್ಕರ್ಮ ಮಹಾಸಭಾ ಅಧ್ಯಕ್ಷ ಗೋಪಾಲಚಾರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ವಿಶ್ವಕರ್ಮ ನಿಗಮದ ನಿರ್ದೇಶಕಿ ವೀಣಾ, ಯತೀಶ್, ಸುಬ್ರಮಣ್ಯಾಚಾರಿ ಹಾಗೂ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿಕ್ಕಬಳ್ಳಾಪುರ ನಗರದ ಕಂದವಾರ ಪೇಟೆಯ ಕಾಳಿಕಾಂಬ ದೇವಸ್ಥಾನದಲ್ಲಿ ಶುಕ್ರವಾರ ವಿಶ್ವಕರ್ಮ ಜಯಂತಿ ಪ್ರಯುಕ್ತ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ಹೋಮ ಹವನಗಳನ್ನು ನೆರವೇರಿಸಲಾಯಿತು.
ವಿಶ್ವಕರ್ಮ ಉತ್ಸವ ಸಮಿತಿ ಅಧ್ಯಕ್ಷ ಸಿ.ಬಿ.ನವೀನ್ ಕುಮಾರ್, ಕಾಳಿಕಾಂಬ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಸುಬ್ಬಲಕ್ಷ್ಮಿ, ಜಮುನಾ ಮತ್ತು ಸಮುದಾಯದವರು ಉಪಸ್ಥಿತರಿದ್ದರು.
ಬಾಗೇಪಲ್ಲಿ ಸತ್ಯಸಾಯಿ ಧರ್ಮಶಾಲಾ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶ್ವಕರ್ಮ ಸಮುದಾಯ ಸಂಘದ ಅಧ್ಯಕ್ಷ ಪಿ.ಜಿ.ಶಿವಶಂಕರಾಚಾರಿ ಮಾತನಾಡಿದರು.
ಅನಾದಿ ಕಾಲದಿಂದಲೂ ವಿಶ್ವಕರ್ಮ ಸಮುದಾಯದವರು ತಮ್ಮ ಮೂಲವೃತ್ತಿಯಲ್ಲಿ ಕರಕುಶಲತೆಯನ್ನು ಬಳಕೆ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಇಂದಿಗೂ ಸಹ ಸಮಾಜದಲ್ಲಿ ಉತ್ತಮ ಹೆಸರು ಪಡೆದಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡಿಲ್ಲ. ಇದರಿಂದ ಕೆಲವರು ಆರ್ಥಿಕತೆಯಲ್ಲಿ ಹಿಂದುಳಿದಿದ್ದಾರೆ. ವಿಶ್ವಕರ್ಮ ಸಮುದಾಯದವರು ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಆರ್ಥಿಕವಾಗಿ ಬಲಿಷ್ಠಗೊಳ್ಳಬೇಕು ಎಂದು ತಿಳಿಸಿದರು.
ಸತ್ಯಸಾಯಿ ಧರ್ಮಶಾಲಾ ಧರ್ಮದರ್ಶಿ ಕೆ.ಎಂ.ನಾಗರಾಜ್, ಅಶೋಕ್ ಕುಮಾರ್, ಶ್ರೀನಿವಾಸಾಚಾರಿ, ವಿಜಯ್ ಕುಮಾರ್, ಕೆ.ಎಲ್.ಸುಬ್ಬರತ್ನಮ್ಮ, ಅನಿತ, ವೆಂಕಟರವಣಾಚಾರಿ, ವೀರಾಚಾರಿ, ರಘುನಾಥ ರೆಡ್ಡಿ, ಅಮರನಾಥ ಬಾಬು,ಶೇಷುಚಾರಿ,ಮನೋಹರಚಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.