Chikkaballapur : ಕನಿಷ್ಠ ವೇತನ, ಪಿಂಚಣಿ ಮತ್ತು ಕೋವಿಡ್ ಕಾರಣದಿಂದ ಮೃತಪಟ್ಟವರಿಗೆ ಪರಿಹಾರ ನೀಡಲು ಆಗ್ರಹಿಸಿ ಚಿಕ್ಕಬಳ್ಳಾಪುರ ನಗರದ ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ಅಂಗನವಾಡಿ ನೌಕರರ ಸಂಘ (Anganwadi Workers Association), ಅಕ್ಷರ ದಾಸೋಹ ನೌಕರರ ಸಂಘ (Akshara Dasoha Workers Association) ಹಾಗೂ ಆಶಾ ಕಾರ್ಯಕರ್ತೆಯರ ಸಂಘದ (ASHA Workers Association) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೋವಿಡ್ ಲಸಿಕೆ ಅಭಿಯಾನ, ಅಪೌಷ್ಟಿಕತೆ ನಿವಾರಣೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಕಾರ್ಯಕರ್ತೆಯರು ಭಾಗಿಯಾಗಿದ್ದಾರೆ. ಆದರೆ ಅವರ ಬದುಕಿಗೆ ಭದ್ರತೆ ಇಲ್ಲವಾಗಿದೆ. ಕೋವಿಡ್ ಕಾರಣದಿಂದ ದುಡಿಯುವ ವರ್ಗಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ, ಬಸಿಯೂಟ ನೌಕರರಿಗೆ ಕಾಲಮಿತಿಯ ಒಳಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕು.ಮಾಸ್ಕ್ ಪಿ ಪಿ ಈ ಕಿಟ್ ಸೇರಿದಂತೆ ಸುರಕ್ಷಾ ಸಾಧನಗಳನ್ನು ಒದಗಿಸಬೇಕು. ಸೇವೆಯಲ್ಲಿದ್ದಾಗ ಕೋವಿಡ್‌ಗೆ ತುತ್ತಾದವರಿಗೆ ಕನಿಷ್ಠ ₹ 10 ಲಕ್ಷ ರೂ ಪರಿಹಾರ ನೀಡಬೇಕು. ಹೆಚ್ಚುವರಿಯಾಗಿ ಮಾಸಿಕ ₹ 10 ಕೋವಿಡ್ ಭತ್ಯೆ ನೀಡಬೇಕು. 60 ವರ್ಷ ವಯಸ್ಸಿನ ನೆಪವೊಡ್ಡಿ ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆಯಬಾರದು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur