Chikkaballapur : BJP ಕಾರ್ಯಕರ್ತರು, ಚಿಕ್ಕಬಳ್ಳಾಪುರ ನಗರದಲ್ಲಿ ಶೋಭಾಯಾತ್ರೆ ನಡೆಸಿ, ಭುವನೇಶ್ವರಿ ವೃತ್ತದ ಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ 42ನೇ ಸಂಸ್ಥಾಪನಾ ದಿನವನ್ನು (BJP Foundation Day) ಆಚರಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ 1980ರಲ್ಲಿ ಬಿಜೆಪಿ ಸ್ಥಾಪಿಸಿ, ಪಂಡಿತ್ ದೀನದಯಾಳ್ ಉಪಾಧ್ಯಾಯ ಅಡಿಪಾಯ ಹಾಕಿದ್ದಾರೆ. ವಾಜಪೇಯಿ ಸೇರಿದಂತೆ ಇತರರ ಪರಿಶ್ರಮದಿಂದ ಪಕ್ಷವು ದೇಶಾದ್ಯಂತ ಬೃಹದಾಕಾರವಾಗಿ ಬೆಳೆದಿದೆ.
ಪ್ರಸ್ತುತ ಭಾರತವು ಅಭಿವೃದ್ಧಿಶೀಲ ದೇಶವಾಗಿ ಇಡೀ ವಿಶ್ವದ ಗಮನ ಸೆಳೆಯುವುದಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕಾರಣ. 18 ಕೋಟಿ ಸದಸ್ಯತ್ವ ಹೊಂದಿರುವ ವಿಶ್ವದ ಏಕೈಕ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಯನ್ನು ಪಕ್ಷ ಹೊಂದಿದೆ ಎಂದರು.
ಪಕ್ಷದ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿಧರ್, ಮರಳಕುಂಟೆ ಕೃಷ್ಣಮೂರ್ತಿ, ಲಕ್ಷ್ಮೀಪತಿ, ಅಶೋಕ್, ಮಧುಚಂದ್ರ, ಕೆ.ಎಸ್.ಕೃಷ್ಣಾರೆಡ್ಡಿ, ಎಸ್‌ಆರ್‌ಎಸ್ ದೇವಾ ರಾಜ್, ಕಂದವಾರ ಮುರಳಿ, ಆನಂದ್, ಲೀಲಾವತಿ ಶ್ರೀನಿವಾಸ್, ಪ್ರೇಮಲೀಲಾ, ಸುಮಿತ್ರಾ, ಮಲ್ಲಿಕ, ನಾಗರಾಜಚಾರಿ, ಕನಕಶ್ರೀ ಮಂಜುನಾಥ್, ಅಭಿಷೇಕ್, ಸಿ.ಬಿ.ಕಿರಣ್, ಬೈರೇಗೌಡ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur