Chikkaballapur : ಚಿಕ್ಕಬಳ್ಳಾಪುರ ನಗರಸಭೆಯಲ್ಲಿ (City Municipal Council) ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ವಿಚಾರಗಳ ಕುರಿತು ಸದಸ್ಯರ ನಡುವೆ ಚರ್ಚೆ ನಡೆಯಿತು. ಸಭೆಯ ಆರಂಭದಿಂದಲೂ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಅಜೆಂಡಾದಲ್ಲಿರುವ ವಿಷಯಗಳ ಕುರಿತು ಮಾತ್ರ ಚರ್ಚಿಸಿ ಎಂದರೂ ಸದಸ್ಯರು ಅಜೆಂಡಾ ಪಟ್ಟಿಯ ವಿಷಯಗಳ ಜತೆ ಜತೆಯಲ್ಲಿಯೇ ನಗರದ ವಿವಿಧ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆದರು.
ಸಭೆಯಲ್ಲಿ ಪೌರಕಾರ್ಮಿಕರ ಸಮಸ್ಯೆ, ತ್ಯಾಜ್ಯ ನಿರ್ವಹಣೆ, ನಗರಸಭೆ ಕಾರ್ಯಾಲಯದ ಮುಂಭಾದ ವೃತ್ತದಲ್ಲಿ ಮಿಲ್ಕ್ ಪಾರ್ಲರ್ ಜಾಗದ ಬಾಡಿಗೆ ಹೆಚ್ಚಳ, ಯುಜಿಡಿ ಸಮಸ್ಯೆ ಕುರಿತು ಚರ್ಚೆ ನಡೆಯಿತು.
ಸದಸ್ಯರಾದ ಎ.ಗಜೇಂದ್ರ, ಜೆ.ನಾಗರಾಜ್, ಆರ್.ಮಟಮಪ್ಪ, ಟಿ.ಜಿ.ಅಂಬರೀಷ್, ಎಸ್.ಎಂ.ರಫೀಕ್, ವೆಂಕಟೇಶ್, ಯತೀಶ್, ವಿ.ಸುಬ್ರಹ್ಮಣ್ಯಾಚಾರಿ, ಮಂಜುನಾಥಾಚಾರಿ, ನರಸಿಂಹಮೂರ್ತಿ, ಪ್ರೇಮಾಲೀಲಾ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.