Chikkaballapur : ಚಿಕ್ಕಬಳ್ಳಾಪುರ ನಗರಸಭೆ (City Municipal Council) ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರದ ಜೊತೆಗೆ ಉಚಿತ ಮೊಟ್ಟೆ ವಿತರಣೆ (Egg Distribution) ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು “ನಗರಸಭೆಯಿಂದ ಈಗಾಗಲೇ ಉಪಾಹಾರ ನೀಡಲಾಗುತ್ತಿದ್ದು ಇದರ ಜೊತೆಗೆ ವರ್ಷದ 365 ದಿನಗಳು ಮೊಟ್ಟೆ ವಿತರಿಸಲಾಗುವುದು. ನಗರವನ್ನು ಸ್ವಚ್ಛ ಪರಿಸರವನ್ನಾಗಿಸುವ ಸೇನಾನಿಗಳಾದ ಪೌರಕಾರ್ಮಿಕರು ಪೌಷ್ಠಿಕ ಆಹಾರ ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸೋಮವಾರ ಮತ್ತು ಶನಿವಾರ ಮೊಟ್ಟೆ ತಿನ್ನದ ಪೌರಕಾರ್ಮಿಕರಿಗೆ ಸಿಹಿ ವಿತರಿಸಲಾಗುವುದು” ಎಂದು ಹೇಳಿದರು.
ಪ್ರಭಾರ ಪೌರಾಯುಕ್ತ ಉಮಾಶಂಕರ್, ನಗರಸಭೆ ಸದಸ್ಯರು, ಆರೋಗ್ಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.