19.4 C
Bengaluru
Monday, November 11, 2024

covid-19 3ನೇ ಅಲೆ ಪೂರ್ವ ಸಿದ್ಧತಾ ಸಭೆ; ಆಗಸ್ಟ್ ನಿಂದ ಇಲ್ಲಿಯವರೆಗೂ 12 ಮಕ್ಕಳಿಗೆ ಕೋವಿಡ್

- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ covid-19 3ನೇ ಅಲೆ (Third Wave) ಕುರಿತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಆರಂಭದಿಂದ ಇಲ್ಲಿಯವರೆಗೆ 4,220 ಮಕ್ಕಳು ಸೋಂಕಿಗೆ ಒಳಗಾಗಿದ್ದು, ಮೊದಲ ಅಲೆಯಲ್ಲಿ 2,143, 2ನೇ ಅಲೆಯಲ್ಲಿ 2,065 ಮಕ್ಕಳು ಹಾಗೂ ಆಗಸ್ಟ್‌ನಿಂದ ಇಲ್ಲಿಯವರೆಗೆ 12 ಮಕ್ಕಳು ಸೋಂಕಿಗೆ ಒಳಪಟ್ಟಿದ್ದಾರೆ. ಜಿಲ್ಲಾಡಳಿತದ ಮುನ್ನೆಚ್ಚರಿಕಾ ಕ್ರಮಗಳಿಂದ ಹಾಗೂ ಸೂಕ್ತ ವೈದ್ಯಕೀಯ ಚಿಕಿತ್ಸಾ ಸೇವೆ ನೀಡಿದ್ದರ ಫಲವಾಗಿ ಎಲ್ಲರೂ ಗುಣಮುಖರಾಗಿದ್ದಾರೆ, 20 ವರ್ಷಕ್ಕಿಂತ ಕೆಳಗಿನ ವಸ್ಸಿನವರಲ್ಲಿ ಯವುದೇ ಸಾವು ಜಿಲ್ಲೆಯಲ್ಲಿ ಸಂಭವಿಸಿಲ್ಲ ಎಂದು ಅವರು ತಿಳಿಸಿದರು.

ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 3ನೇ ಅಲೆ ಬರುತ್ತದೋ ಇಲ್ಲವೊ ಆದರೆ ಹಿಂದಿನ ಎರಡೂ ಅಲೆಗಳಲ್ಲಿ ತಲೆದೋರಿದ ಸಮಸ್ಯೆಗಳನ್ನು ಅವಲೋಕಿಸಿ ಪೂರ್ವ ಸಿದ್ಧತೆಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಬೇಕಿದೆ. ಮುಂದಿನ ದಿನಗಳಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸಿ ಮಕ್ಕಳು ಕೋವಿಡ್‌ನಿಂದ ಬಾಧಿತರಾಗದಂತೆ ತಡೆಗಟ್ಟಬೇಕು ಎಂದರು.

ಜಿಲ್ಲೆಯಲ್ಲಿ ಕೋವಿಡ್ ಸೊಂಕಿಗೆ ಒಳಗಾಗುವ ಮಕ್ಕಳ ಚಿಕಿತ್ಸೆಗಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 295 ಆಮ್ಲಜನಕಯುಕ್ತ ಹಾಸಿಗೆಗಳನ್ನು ಮಿಸಲಿಡಲಾಗಿದ್ದು, ಸಮಸ್ಯೆಗಳನ್ನು ಮುಂಚೆಯೇ ಗುರುತಿಸಿ ಹಾಸಿಗೆ ವ್ಯವಸ್ಥೆ, ಅಗತ್ಯ ಔಷಧಿಗಳ ಪೂರೈಕೆ ಮತ್ತು ಕೋವಿಡ್ ಟೆಸ್ಟ್ ಕಿಟ್ ಗಳ ದಾಸ್ತಾನು ಮತ್ತು ಆಮ್ಲಜನಕ ನಿರ್ವಹಣೆ ಕುರಿತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!