Chikkaballapur :
ನಾಡಹಬ್ಬ ದಸರಾ ಅಂಗವಾಗಿ ನವರಾತ್ರಿ ಉತ್ಸವಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುರುವಾರ ಚಾಲನೆ ದೊರೆತಿದೆ. ಜಿಲ್ಲೆಯಾದ್ಯಂತ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಸೇರಿದಂತೆ ಜಗನ್ಮಾತೆಯ ದೇವಾಲಯಗಳಲ್ಲಿ ಪೂಜಾ ಕಾರ್ಯಗಳು ನಡೆದವು ಮತ್ತು ಅನೇಕ ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ದಸರಾ ಪ್ರಯುಕ್ತ ಗೊಂಬೆಗಳನ್ನು ಕೂರಿಸಲಾಗಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು ಗುರುವಾರ ಶೈಲ ಪುತ್ರಿಯ ಆರಾಧನೆ ನಡೆಯಿತು.
ನವರಾತ್ರಿಯ ಮೊದಲನೇ ದಿನಾ ನಗರದ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಪಾರ್ವತಿ ಅಮ್ಮನವರಿಗೆ ಅರಿಶಿನ ಅಲಂಕಾರ ಮಾಡಲಾಗಿತ್ತು.
For Daily Updates WhatsApp ‘HI’ to 7406303366
Images : Sri Madhusudan Sai Global Humanitarian Mission