Chikkaballapur : ಜಿಲ್ಲಾಧಿಕಾರಿ ಆರ್.ಲತಾ (Deputy Commissioner R. Latha) ಚಿಕ್ಕಬಳ್ಳಾಪುರ ತಾಲ್ಲೂಕಿನ ಯಲವಳ್ಳಿಯ ಸಿದ್ಧಾರ್ಥ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ (SSLC Students) ಜತೆ ಪರೀಕ್ಷೆಯ ವಿಚಾರವಾಗಿ ಸಂವಾದ (Interaction) ಕಾರ್ಯಕ್ರಮ ನಡೆಸಿದರು.
SSLC ಪರೀಕ್ಷೆ ಮಾರ್ಚ್ 28 ಕ್ಕೆ ನಡೆಯಲಿದ್ದು ಗ್ರಾಮೀಣ ವಿದ್ಯಾರ್ಥಿಗಳಾಗಿರುವ ನೀವು ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯ ಪ್ರದರ್ಶಿಸಲು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಒಳ್ಳೆಯ ವೇದಿಕೆ ಆಗಲಿದೆ. ಸಮಯ ವ್ಯರ್ಥ ಮಾಡದೆ ಓದಿನ ಕಡೆ ಹೆಚ್ಚಿನ ಗಮನ ನೀಡಿ ಉತ್ತಮ ಅಂಕಗಳನ್ನು ಪಡೆಯಬೇಕು. ಹೆಚ್ಚು ಪುನರ್ ಮನಾನಾ ಮಾಡಿಕೊಂಡು ಅರ್ಥವಾಗದ ವಿಷಯಗಳ ಬಗ್ಗೆ ಶಿಕ್ಷಕರ ಜತೆ ಚರ್ಚಿಸಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳಬೇಕು ಎಂದು ಜಿಲ್ಲಾಧಿಕಾರಿಗಳು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಹ ಶಿಕ್ಷಕರಾದ ನಂಜೇಗೌಡ, ಪ್ರೌಢಶಾಲೆಯ ನಿರ್ದೇಶಕ ಮಂಜಣ್ಣ, ಮುಖ್ಯಕಾರ್ಯದರ್ಶಿ ಚಲಪತಿ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur