Chikkaballapur : ಚಿಕ್ಕಬಳ್ಳಾಪುರ ನಗರದ ಭಗತ್‌ಸಿಂಗ್ ನಗರದಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದ ಕರಗ ಮಹೋತ್ಸವದ (Dharmarayaswamy Karaga) ಭಾಗವಾಗಿ ಸೋಮವಾರ ಭುವನೇಶ್ವರಿ ವೃತ್ತದಲ್ಲಿ ‘ಒನಕೆ ಕರಗ’ ವಿಜೃಂಭಣೆಯಿಂದ ನಡೆಯಿತು.
ಸುಮಾರು 6 ಅಡಿ ಉದ್ದದ ಒನಕೆಯ ಒನಕೆ ಮೇಲೆ ಅರಿಶಿಣ ನೀರು ತುಂಬಿಟ್ಟ ತಾಮ್ರದ ಪಾತ್ರೆ ಇಟ್ಟುಕೊಂಡು ತಮಟೆಯ ವಾದನಕ್ಕೆ ತಕ್ಕಂತೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನ ಕರಗದ ಪೂಜಾರಿ ಎಂ.ಬಾಲಾಜಿ ನೃತ್ಯ ಮಾಡಿದರು.