Chikkaballapur : ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಎ.ಅರುಣಾ ಕುಮಾರಿ ಹಾಗೂ ಲೋಕಾಯುಕ್ತ (Lokayukta) ಎಸ್ಪಿ ಪವನ್ ನೆಜ್ಜೂರ್ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ (District Hospital, Chikkaballapur) ಲಂಚಾವತಾರ (Corruption) ಹೆಚ್ಚಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಶುಕ್ರವಾರ ಆಸ್ಪತ್ರೆಗೆ ಭೇಟಿ (Visit) ನೀಡಿ ಪರಿಶೀಲಿಸಿ ರೋಗಿಗಳು ಮತ್ತು ಅವರ ಸಂಬಂಧಿಕರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣಾ ಕುಮಾರಿ ಅವರು “ನಮಗೆ ಬಂದಿರುವ ದೂರು, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೂಚನೆ ಮೇಲೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದೇವೆ. ಜಿಲ್ಲಾಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ, ಅನೈರ್ಮಲ್ಯತೆ ಸೇರಿ ಹಲವು ಸಮಸ್ಯೆಗಳು ಇದ್ದು ರೋಗಿಗಳಿಗೆ ಬಿಸಿನೀರಿನ ವ್ಯವಸ್ಥೆಯಿಲ್ಲ. ಊಟ ಪೂರೈಕೆಯಲ್ಲಿ ಲೋಪವಾಗಿದೆ. ಜನೌಷಧ ಕೇಂದ್ರದಲ್ಲಿ ಅವಧಿ ಮುಗಿದಿರುವ ಔಷಧಿಗಳನ್ನು ವಿತರಿಸುತ್ತಿರುವ ಬಗ್ಗೆ ಪರಿಶೀಲಿಸಿದ್ದು ಹೀಗೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ವೈದ್ಯಕೀಯ ಶಿಕ್ಷಣ ಕಾಲೇಜಿನ ನಿರ್ದೇಶಕ ಮಂಜುನಾಥ್ ಅವರಿಗೆ ಸೂಚಿಸಲಾಗಿದೆ” ಎಂದು ತಿಳಿಸಿದರು.
ಸಾರ್ವಜನಿಕರೂ ಸಹ ವೈದ್ಯರ ಜತೆ ವ್ಯವಹರಿಸುವಾಗ ತಾಳ್ಮೆಯಿಂದ ನಡೆದುಕೊಳ್ಳಬೇಕು. ಅನಗತ್ಯ ಒತ್ತಡ, ಅನಾಗರಿಕ ವರ್ತನೆ ತೋರುವುದು ಸರಿಯಲ್ಲ. ವೈದ್ಯರೂ ನಮ್ಮ ರೀತಿ ಮನುಷ್ಯರೇ ಆಗಿರುವ ಕಾರಣ ಅವರಿಗೂ ನಮ್ಮಂತೆ ಸಿಟ್ಟು, ಕೋಪ, ಸಂತೋಷಗಳಿರುತ್ತವೆ. ಇದನ್ನು ಮನಗಂಡು ಒಳ್ಳೆಯ ರೀತಿ ವ್ಯವಹರಿಸಿಕೊಂಡು ಚಿಕಿತ್ಸೆ ಪಡೆಯಿರಿ ಎಂದು ಅರುಣಾ ಕುಮಾರಿ ಸಲಹೆ ನೀಡಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur