Chikkaballapur: ಕೊರೊನಾ ಸೋಂಕು ತಡೆಗಟ್ಟಲು ಕಳೆದ ಎರಡು ವಾರಗಳು ಜಾರಿಗೊಳಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ Lockdown ನಿಂದ ಅನುಕೂಲವಾಗಿದ್ದು, ಕೊರೊನಾ ಸೋಂಕು ಹರಡುವಿಕೆಯ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಮತ್ತೊಮ್ಮೆ ಜಿಲ್ಲೆಯಾದ್ಯಂತ ಜೂ.3ರಿಂದ ಜೂ.7ರ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೂರ್ಣ ಲಾಕ್ ಡೌನ್ ನಿಯಮಗಳು
- ಮದುವೆ ನಡೆಸಲು ತಹಶೀಲ್ದಾರರ ಅನುಮತಿ ಖಡ್ಡಾಯ. ಕೇವಲ 20 ಜನರೊಂದಿಗೆ ಮದುವೆಗೆ ಮಾತ್ರ ನಡೆಸಲು ಅನುಮತಿ.
- ಗ್ರಾಮ ಲೆಕ್ಕಿಗರು, ಪಿಡಿಒಗಳು ಮದುವೆ ಕಾರ್ಯಕ್ರಮದ ವಿಡಿಯೊ ಮಾಡಿ ಕೋವಿಡ್ ಮಾರ್ಗಸೂಚಿಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಬೇಕು.
- ಅಂತರರಾಜ್ಯ ಮತ್ತು ಅಂತರಜಿಲ್ಲೆಯಲ್ಲಿ ಸೂಚಿಸಿರುವ ವ್ಯಕ್ತಿಗತ ವಾಹನ ಮತ್ತು ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅನುಮತಿ
- ವೈದ್ಯಕೀಯ ಸೇವೆ
- ಅತೀ ತುರ್ತು ಸೇವೆಗಳು
- ಸರ್ಕಾರಿ ನೌಕರರನ್ನು ಕರೆದೊಯ್ಯುವ ವಾಹನಗಳು ಅಧಿಕೃತ ಗುರುತಿನ ಚೀಟಿ ಇದ್ದಲ್ಲಿ ಸಂಚಾರ ಮಾಡಲು ಅನುಮತಿ.
- ವಾಣಿಜ್ಯ ಚಟುವಟಿಕೆಗಳು, ವ್ಯಾಪಾರ – ವಹಿವಾಟು ನಿಷಿದ್ಧ.
- ಹಾಲು ಸರಬರಾಜು ಮಾಡುವ ನಂದಿನಿ ಕೇಂದ್ರಗಳನ್ನು ಬೆಳಿಗ್ಗೆ 6 ರಿಂದ 10ರವರೆಗೆ ತೆರೆಯಲು ಅನುಮತಿ.
- ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಯ ಹತ್ತಿರದ ಇರುವ ಹೋಟೆಲ್ ಗಳಿಂದ ಪಾರ್ಸೆಲ್ ಸೇವೆ ಒದಗಿಸಲು ಮಾತ್ರ ಅನುಮತಿ.
- ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಗೆ ಈ ನಾಲ್ಕು ದಿನಗಳ ಕಾಲ ರಜೆ.
- ಬಾಗೇಪಲ್ಲಿ ಮತ್ತು ಚಿಂತಾಮಣಿ ತಾಲ್ಲೂಕಿನ APMC ಗಳಲ್ಲಿ ಟೊಮೆಟೊ ವಹಿವಾಟಿಗೆ ಜೂ.4 ಮತ್ತು ಜೂ 6ರಂದು ಮಾತ್ರ ಅವಕಾಶ.
- ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಪೆಟ್ರೋಲ್ ಬಂಕ್‌ಗಳಿಗೆ ಮಾತ್ರ ಅನುಮತಿ.