Saturday, July 27, 2024
HomeNewsಜೂನ್ 7ರ ವರೆಗೆ ಮತ್ತೆ ಚಿಕ್ಕಬಳಾಪುರ ಜಿಲ್ಲೆ ಪೂರ್ಣ ಲಾಕ್‌ಡೌನ್

ಜೂನ್ 7ರ ವರೆಗೆ ಮತ್ತೆ ಚಿಕ್ಕಬಳಾಪುರ ಜಿಲ್ಲೆ ಪೂರ್ಣ ಲಾಕ್‌ಡೌನ್

- Advertisement -
- Advertisement -
- Advertisement -
- Advertisement -

Chikkaballapur: ಕೊರೊನಾ ಸೋಂಕು ತಡೆಗಟ್ಟಲು ಕಳೆದ ಎರಡು ವಾರಗಳು ಜಾರಿಗೊಳಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ Lockdown ನಿಂದ ಅನುಕೂಲವಾಗಿದ್ದು, ಕೊರೊನಾ ಸೋಂಕು ಹರಡುವಿಕೆಯ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಮತ್ತೊಮ್ಮೆ ಜಿಲ್ಲೆಯಾದ್ಯಂತ ಜೂ.3ರಿಂದ ಜೂ.7ರ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಪೂರ್ಣ ಲಾಕ್ ಡೌನ್ ನಿಯಮಗಳು

  • ಮದುವೆ ನಡೆಸಲು ತಹಶೀಲ್ದಾರರ ಅನುಮತಿ ಖಡ್ಡಾಯ. ಕೇವಲ 20 ಜನರೊಂದಿಗೆ ಮದುವೆಗೆ ಮಾತ್ರ ನಡೆಸಲು ಅನುಮತಿ.
  • ಗ್ರಾಮ ಲೆಕ್ಕಿಗರು, ಪಿಡಿಒಗಳು ಮದುವೆ ಕಾರ್ಯಕ್ರಮದ ವಿಡಿಯೊ ಮಾಡಿ ಕೋವಿಡ್ ಮಾರ್ಗಸೂಚಿಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಬೇಕು.
  • ಅಂತರರಾಜ್ಯ ಮತ್ತು ಅಂತರಜಿಲ್ಲೆಯಲ್ಲಿ ಸೂಚಿಸಿರುವ ವ್ಯಕ್ತಿಗತ ವಾಹನ ಮತ್ತು ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅನುಮತಿ
    • ವೈದ್ಯಕೀಯ ಸೇವೆ
    • ಅತೀ ತುರ್ತು ಸೇವೆಗಳು
    • ಸರ್ಕಾರಿ ನೌಕರರನ್ನು ಕರೆದೊಯ್ಯುವ ವಾಹನಗಳು ಅಧಿಕೃತ ಗುರುತಿನ ಚೀಟಿ ಇದ್ದಲ್ಲಿ ಸಂಚಾರ ಮಾಡಲು ಅನುಮತಿ.
  • ವಾಣಿಜ್ಯ ಚಟುವಟಿಕೆಗಳು, ವ್ಯಾಪಾರ – ವಹಿವಾಟು ನಿಷಿದ್ಧ.
  • ಹಾಲು ಸರಬರಾಜು ಮಾಡುವ ನಂದಿನಿ ಕೇಂದ್ರಗಳನ್ನು ಬೆಳಿಗ್ಗೆ 6 ರಿಂದ 10ರವರೆಗೆ ತೆರೆಯಲು ಅನುಮತಿ.
  • ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಯ ಹತ್ತಿರದ ಇರುವ ಹೋಟೆಲ್ ಗಳಿಂದ ಪಾರ್ಸೆಲ್ ಸೇವೆ ಒದಗಿಸಲು ಮಾತ್ರ ಅನುಮತಿ.
  • ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಗೆ ಈ ನಾಲ್ಕು ದಿನಗಳ ಕಾಲ ರಜೆ.
  • ಬಾಗೇಪಲ್ಲಿ ಮತ್ತು ಚಿಂತಾಮಣಿ ತಾಲ್ಲೂಕಿನ APMC ಗಳಲ್ಲಿ ಟೊಮೆಟೊ ವಹಿವಾಟಿಗೆ ಜೂ.4 ಮತ್ತು ಜೂ 6ರಂದು ಮಾತ್ರ ಅವಕಾಶ.
  • ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಪೆಟ್ರೋಲ್ ಬಂಕ್‌ಗಳಿಗೆ ಮಾತ್ರ ಅನುಮತಿ.
- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!