Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಅನೇಕ ಕಡೆ ಅಗಲಿದ ನಾಯಕ ನಟ ಪುನೀತ್ ರಾಜ್ ಕುಮಾರ್ ರವರ ಪುಣ್ಯಸ್ಮರಣೆ ನಡೆಯಿತು.
ಚಿಕ್ಕಬಳ್ಳಾಪುರ :
ಚಿಕ್ಕಬಳ್ಳಾಪುರ ನಗರದ ಬಲಮುರಿ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಕೆ.ವಿ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನವೀನ್ ಕಿರಣ್, ಮೊಬೈಲ್ ಬಾಬು ಇತರರು ಪಾಲ್ಗೊಂಡು ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನಗರದ ಆಟೊ ನಿಲ್ದಾಣ, ಬಸ್ ನಿಲ್ದಾಣ, ಎಪಿಎಂಸಿ, ಕೋದಂಡ ರಾಮಸ್ವಾಮಿ ದೇವಸ್ಥಾನ, ಭುವನೇಶ್ವರಿ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ ಅಂಗವಾಗಿ ಅನ್ನ ಸಂತರ್ಪಣೆ ನಡೆಯಿತು.
ತಾಲ್ಲೂಕ್ಕಿನ ಹೊಸಹೂಡ್ಯ ಗ್ರಾಮದಲ್ಲಿ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕಮವನ್ನು ಗ್ರಾಮಸ್ಥರು ಆಯೋಜಿಸಿದರು.
ಸಾದಲಿ
ಸಾದಲಿ ಯುವಕರ ಬಳಗ ಹಾಗೂ ಪುನೀತ್ ಅಭಿಮಾನಿಗಳಿಂದ ಸಾದಲಿ ಬಸ್ ನಿಲ್ದಾಣದ ಬಳಿ ನಟ ಪುನೀತ್ ಭಾವಚಿತ್ರಕ್ಕೆ ಸೋಮವಾರ ನಮನ ಸಲ್ಲಿಸಲಾಯಿತು. ಎಸ್.ಎನ್ ನಾರಾಯಣಪ್ಪ, ನಾರಾಯಣಪ್ಪ, ರಾಮಕೃಷ್ಣಪ್ಪ, ಆಂಜನಪ್ಪ, ಎಸ್.ಜೆ ಶ್ರೀನಿವಾಸ್, ಕುಮಾರ್, ಬಾಲಾಜಿ, ದೇವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಂಬನಿ ಮಿಡಿದರು
ಚೇಳೂರು:
ಚೇಳೂರಿನ ಎಂಜಿ ಸರ್ಕಲ್‌ನಲ್ಲಿ ಪುನೀತ್ ರಾಜ್‍ಕುಮಾರ್ ರವರಿಗೆ ಅಭಿಮಾನಿಗಳು ಶ್ರದಾಂಜಲಿ ಸಲ್ಲಿಸಿದರು.
ಶಿಡ್ಲಘಟ್ಟ:
ನಗರದ ಮಯೂರ ವೃತದ ಬಳ್ಳಿರುವ ಹಳೆ ಅಂಚೆ ಕಚೇರಿ ರಸ್ತೆಯ ಸ್ನೇಹ ಯುವಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಹಾಗು ಪುನೀತ್ ರಾಜ್ ಕುಮಾರ್ ರವರ ಪುಣ್ಯಸ್ಮರಣೆ ಪ್ರಯುಕ್ತ ಅನ್ನದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ನೇಹ ಯುವಕರ ಸಂಘದ ಅಧ್ಯಕ್ಷ ಎನ್.ಭರತ್, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ನಗರಠಾಣೆ ಪಿಎಸ್‌ಐ ಸತೀಶ್,ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಗರಸಭೆ ಸದಸ್ಯ ಮಂಜುನಾಥ್, ಅನಿಲ್ ಕುಮಾರ್, ಮುಖಂಡ ಲಕ್ಷ್ಮಿನಾರಾಯಣ, ಎಸ್.ಎಂ.ರಮೇಶ್, ಮನೋಹರ್, ಶ್ರೀನಿವಾಸ್, ಡಿ.ವಿ.ವೆಂಕಟೇಶ್, ಮುನಿರಾಜ್, ನವೀನ್, ಶ್ರೀನಿವಾಸ್, ಉದಯ್, ಸುನಿಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.