Sidlaghatta : ಅಗಲಿದ ನಾಯಕ ನಟ ಪುನೀತ್ ರಾಜ್ ಕುಮಾರ್ ರವರಿಗೆ ಶ್ರದಾಂಜಲಿ ಸಲ್ಲಿಸಲು ಶಿಡ್ಲಘಟ್ಟ ನಗರದ ಶ್ರೀ ವೆಂಕಟೇಶ್ವರ ಸಿನಿಮಾಸ್ ಚಿತ್ರಮಂದಿರದ ಆವರಣದಲ್ಲಿ 7/11/2021 ರ ಭಾನುವಾರ ಸಂಜೆ 6 ಗಂಟೆಗೆ ಪುನೀತ್ ರ ಭಾವಚಿತ್ರಕ್ಕೆ ಪುಷ್ಪಾಲಂಕಾರ ಮಾಡಿ ದೀಪಾರಾಧನೆ ಮಾಡಲಾಯಿತು.

ಅಪ್ಪು ಅಭಿಮಾನಿಗಳ ಜೊತೆ ಚಿತ್ರಮಂದಿರದ ಸಿಬ್ಬಂಧಿ ದೀಪಗಳನ್ನು ಹಚ್ಚುವ ಮೂಲಕ ಅಗಲಿದ ನೆಚ್ಚಿನ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಚಿತ್ರಮಂದಿರದ ಮಾಲೀಕರಾದ ಎಸ್. ಪ್ರಕಾಶ್ ಮಾತನಾಡಿ ಪುನೀತ್ ರ ಅಗಲಿಕೆಯನ್ನು ಈಗಲೂ ನಂಬುವುದಕ್ಕೆ ಅಸಾಧ್ಯವಾಗಿದ್ದು ಅವರನ್ನು ಕಳೆದುಕೊಂಡು ಚಿತ್ರರಂಗ ಬಡವಾಯಿತು ಎಂದು ತಿಳಿಸಿದರು.
ಚಿತ್ರ ವಿತರಕ ಮೋಹನ್ ಬಾಬು ಬಿ.ಕೆ ಮಾತನಾಡಿ ಅಪ್ಪು ದೇಶ ಕಂಡ ಮಹಾನ್ ಮಾನವತಾವಾದಿ ಅವರ ಅಗಲಿಕೆ ನಮಗೆ ಅತೀವ ನೋವನ್ನುಂಟುಮಾಡಿದೆ, ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಹೇಳಿದರು.
ಕಾರ್ಯಕಮದಲ್ಲಿ ಶ್ರೀ ವೆಂಕಟೇಶ್ವರ ಸಿನಿಮಾಸ್ ಚಿತ್ರಮಂದಿರದ ಸಿಬ್ಬಂಧಿಯಾದ ಶ್ರೀನಿವಾಸ್, ಅಶ್ವಥ್ ನಾರಾಯಣ, ಗಣೇಶ್ ಶ್ರೀನಿವಾಸ್, ಶಿವಕುಮಾರ್, ಮಾರೇಶ್, ಶಾಹೀದ್, ಪ್ರದೀಪ್, ಡೇವಿಡ್ ಹಾಗೂ ಅಪ್ಪು ಅಭಿಮಾನಿಗಳು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
[…] ಪುನೀತ್ ರಾಜ್ ಕುಮಾರ್ ರವರಿಗೆ ದೀಪಾಂಜಲಿ […]