Chikkaballapur : ಕರ್ನಾಟಕ ರಾಜ್ಯದಾದ್ಯಂತ ಸೆ.29 ಗುರುವಾರ ದಂದು ನಡೆದ ಲಸಿಕಾ ಮೇಳದಲ್ಲಿ ನಿಗದಿಯಾಗಿದ್ದ 40 ಸಾವಿರ ಡೋಸ್ ಲಸಿಕೆ (Covid-19 Vaccination) ಹಾಕುವ ಗುರಿಯನ್ನು ಮೀರಿ ಶೇ 101 ರಷ್ಟು ಗುರಿ ಸಾಧಿಸಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ.
ಜಿಲ್ಲೆಯಲ್ಲಿ ಈವರೆಗೆ 11,83,467 ಡೋಸ್ ಕೋವಿಡ್ ಲಸಿಕೆ ಹಾಕಲಾಗಿದೆ. ಈ ಪೈಕಿ 7,98,771 ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 3,84,696 ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದರು.
ಲಸಿಕಾ ಮೇಳ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರೂ ಎರಡೂ ಡೋಸ್ ಲಸಿಕೆ ಪಡೆದು ಶೇ 100 ರಷ್ಟು ಪ್ರಗತಿ ಸಾಧಿಸು ವವರೆಗೂ ಲಸಿಕಾ ಮೇಳ ಮುಂದುವರೆಯಬೇಕು. ಈ ಹಿಂದೆ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂ.21ರಂದು ಹಮ್ಮಿಕೊಂಡಿದ್ದ ಲಸಿಕಾ ಮೇಳದಲ್ಲಿ 30 ಸಾವಿರ ಲಸಿಕೆ ನೀಡಲು ಗುರಿ ನಿಗದಿಪಡಿಸಲಾಗಿತ್ತು. ಆ ಗುರಿಯನ್ನು ಮೀರಿ ಲಸಿಕೆ ಹಾಕಲಾಗಿತ್ತು ಎಂದು ತಿಳಿಸಿದರು.

Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur