Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯ ಹೂವಿನ ಮಾರುಕಟ್ಟೆ (Flower Market) ಸಮಸ್ಯೆಗೆ ಪರಿಹಾರ ಸಿಗುವ ದಿನಗಳು ಸಮೀಪಿಸುತ್ತಿವೆ. ನಂದಿ ಕ್ರಾಸ್ ಬಳಿ ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಇರುವ 20 ಎಕರೆ ಜಾಗವನ್ನು ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣಕ್ಕಾಗಿ ಎಪಿಎಂಸಿಗೆ ಹಸ್ತಾಂತರಿಸಲಾಗಿದೆ.
ಈ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಗೊಂಡಿದ್ದು, ಶೀಘ್ರದಲ್ಲಿ ಅಂತಿಮ ರೂಪ ನೀಡಲು ಸಕಲ ಸಿದ್ಧತೆಗಳು ನಡೆದಿವೆ.
ನಂದಿ ಕ್ರಾಸ್‌ನ ತೋಟಗಾರಿಕೆ ಇಲಾಖೆಯ ವ್ಯಾಪ್ತಿಯ 46 ಎಕರೆ ಜಾಗದಲ್ಲಿ ಕೆಲವು ಕಚೇರಿ ಕಟ್ಟಡಗಳು, ನರ್ಸರಿ, ಸಂಶೋಧನಾ ತೋಪುಗಳಿವೆ. ಹೂವಿನ ಮಾರುಕಟ್ಟೆ ನಿರ್ಮಾಣಕ್ಕಾಗಿ ಈ ಜಾಗವೇ ಸೂಕ್ತ ಎಂದು ತೀರ್ಮಾನಿಸಿ, ಸಚಿವ ಸಂಪುಟದ ಅನುಮೋದನೆಯಂತೆ ಜಾಗ ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.