Chikkaballapur : ಚಿಕ್ಕಬಳ್ಳಾಪುರ ನಗರದ ಪರಿಷತ್ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷೆ ಉಷಾ ಶ್ರೀನಿವಾಸಬಾಬು ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ (Karnataka Janapada Academy Award 2021) ಗ.ನ. ಅಶ್ವತ್ಥ್ ರವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷೆ ಉಷಾ ಶ್ರೀನಿವಾಸಬಾಬು ” ಗ.ನ. ಅಶ್ವತ್ಥ್ ಅವರು ಜಾನಪದ ಲೋಕದಲ್ಲಿ ಮಾತ್ರವಲ್ಲದೆ ಸಮಾಜ ಸೇವೆ, ಶಿಕ್ಷಣ, ಹೋರಾಟ, ರಾಜಕಾರಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅವರನ್ನು ಜಾನಪದ ಕ್ಷೇತ್ರದಲ್ಲಿ ಗುರುತಿಸಿ ಪ್ರಶಸ್ತಿ ನೀಡಿರುವುದು ಜಿಲ್ಲೆಗೆ ಸಂದ ಗೌರವ. ಜಾನಪದ ಪರಿಷತ್ ನಡೆಸುವ ಚಟುವಟಿಕೆಗಳಿಗೆ ಅಶ್ವತ್ಥ್ ಅವರ ಸಹಕಾರವನ್ನು ಕೋರಿದ್ದು ಅವರ ಕಾರ್ಯಕ್ಷೇತ್ರ ಮತ್ತಷ್ಟು ಹಿರಿದಾಗಲಿ” ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಗ.ನ. ಅಶ್ವತ್ಥ್, ಪರಿಷತ್ ಚಟುವಟಿಕೆಗಳಲ್ಲಿ ನಾನು ಸಹ ಪಾಲ್ಗೊಂಡು ಕೈಯಲ್ಲಾದ ಸಹಕಾರವನ್ನು ನೀಡುವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರಿಷತ್ ಗೌರವಾಧ್ಯಕ್ಷ ವೈ.ಎಲ್.ಹನುಮಂತರಾವ್, ಪ್ರಧಾನ ಕಾರ್ಯದರ್ಶಿ ಜನಾರ್ದನ್, ತಾಲ್ಲೂಕು ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್, ಲೀಲಾವತಿ, ಮಂಜುಳಾ, ಶೋಭಾ, ನಾಗರಾಜಾಚಾರಿ, ಮಂಜುನಾಥ್ ಮತಿತ್ತರರು ಉಪಸ್ಥಿತರಿದ್ದರು.