Monday, May 29, 2023
HomeChikkaballapur‘ಜನತಾ ಜಲಧಾರೆ’ ಅಭಿಯಾನದ ಪೂರ್ವಭಾವಿ ಸಭೆ

‘ಜನತಾ ಜಲಧಾರೆ’ ಅಭಿಯಾನದ ಪೂರ್ವಭಾವಿ ಸಭೆ

- Advertisement -
- Advertisement -
- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ನಗರದ ಜಿಲ್ಲಾ JDS ಕಚೇರಿಯಲ್ಲಿ ಭಾನುವಾರ ‘ಜನತಾ ಜಲಧಾರೆ’ (Janata Jaladhare) ಅಭಿಯಾನದ ಪೂರ್ವಭಾವಿ ಸಭೆ (Meeting) ನಡೆಯಿತು.

ಸಭೆಯಲ್ಲಿ ಮಾತಾನಾಡಿದ ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ ” ಜಿಲ್ಲೆಯಲ್ಲಿ ಜೆಡಿಎಸ್‌ಗೆ ಭದ್ರವಾದ ನೆಲೆ ಇದ್ದು ಅದನ್ನು ಮತ್ತಷ್ಟು ಸಶಕ್ತಗೊಳಿಸಲು ಮುಂದಿನ ವಿಧಾನಸಭಾ ಚುನಾವಣೆ ಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಂಘಟನೆಗೆ ಪಕ್ಷದ ಪದಾಧಿಕಾರಿಗಳು ಪ್ರಾಮುಖ್ಯ ನೀಡಬೇಕು” ಎಂದು ಹೇಳಿದರು.

ಜನತಾ ಜಲಧಾರೆ ಯಾತ್ರೆಯು ಪಕ್ಷ ಸಂಘಟನೆಯ ಜತೆಯಲ್ಲಿ ಜಿಲ್ಲೆಯ ನೀರಿನ ಸಮಸ್ಯೆ ಮತ್ತು ಆ ಸಮಸ್ಯೆಗಳ ಪರಿಹಾರ ಕುರಿತು ಪಕ್ಷದ ಹೆಜ್ಜೆಗಳನ್ನು ಮನದಟ್ಟು ಮಾಡಿಕೊಡುತ್ತದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಿಲ್ಲೆಯ ನೀರಾವರಿ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದ್ದು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು, ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್.ರೆಡ್ಡಿ, ಮುಖಂಡರಾದ ನರಸಿಂಹಮೂರ್ತಿ, ಡಿ.ಜೆ.ನಾಗರಾಜರೆಡ್ಡಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!